ಜಗತ್ತಿನ ಅತಿ ದುಬಾರಿ ರೂಬಿ ರೋಮನ್ ದ್ರಾಕ್ಷಿ ಕೊಪ್ಪಳದಲ್ಲಿ: ಒಂದು ಕೆಜಿಗೆ 8 ಲಕ್ಷ ರೂ

Picture of Savistara

Savistara

Bureau Report

ಕೊಪ್ಪಳ: ನೀವು ಮಾರುಕಟ್ಟೆಯಲ್ಲಿ ಯಾವುದೇ ಹಣ್ಣು ಖರೀದಿ ಮಾಡಿದರು ಕೂಡ ಅದು ಕೆಜಿಗೆ ಇನ್ನೂರರಿಂದ ಸಾವಿರದವರಗೆ ಸಿಗುತ್ತದೆ. ಆದರೆ ಒಂದು ಕೆಜಿ ತೂಕದ ಆ ಹಣ್ಣಿನ ಬೆಲೆ ಬರೋಬ್ಬರಿ ಎಂಟು ಲಕ್ಷ ರೂ. ಇದು ಅಚ್ಚರಿಯಾದರು ಕೂಡ ಸತ್ಯ. ಹೀಗಾಗಿಯೇ ಆ ದ್ರಾಕ್ಷಿಯನ್ನು ಜಗತ್ತಿನ ಅತಿ ದುಬಾರಿ ದ್ರಾಕ್ಷಿ ಅಂತಲೇ ಕರೆಯುತ್ತಾರೆ. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋ ಮಾತಿದೆ. ಆದರೆ ದುಬಾರಿ ಬೆಲೆಯ ದ್ರಾಕ್ಷಿ ಇದೀಗ ಕೊಪ್ಪಳದಲ್ಲಿದೆ. ಹಾಗಂತ ಮಾರಾಟಕ್ಕಲ್ಲ. ಸದ್ಯ ಅದನ್ನು ನೋಡಿ ಮಾತ್ರ ಆನಂದಿಸಬಹುದು. ಕೊಪ್ಪಳದಲ್ಲಿ ಆರಂಭವಾಗಿರುವ ಹಣ್ಣು ಮೇಳದಲ್ಲಿ ರೂಬಿ ರೋಮನ್ ದ್ರಾಕ್ಷಿ ಎಲ್ಲರನ್ನು ಸೆಳೆಯುತ್ತಿದೆ. ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಣ್ಣು ಮತ್ತು ಜೇನು ಮೇಳ ಆರಂಭವಾಗಿದೆ. ಶಿವರಾತ್ರಿ ಹಬ್ಬದ ಅಂಗವಾಗಿ, ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಕಳೆದ ಕೆಲ ವರ್ಷಗಳಿಂದ ಪ್ರತಿವರ್ಷ ಹಣ್ಣು ಮತ್ತು ಜೇನು ಮೇಳವನ್ನು ಆಯೋಜಿಸುತ್ತಿದೆ.ಐದು ದಿನಗಳ ಈ ಮೇಳಕ್ಕೆ ಇಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಚಾಲನೆ ನೀಡಿದರು. ಈ ಮೇಳದಲ್ಲಿ ದೇಶಿಯವಾಗಿ ಬೆಳೆಯವ ಪಪ್ಪಾಯ, ಕಲ್ಲಂಗಡಿ, ದ್ರಾಕ್ಷಿ, ಸೇಬು, ಪೇರು, ಕರಬೂಜ ಸೇರಿದಂತೆ ಅನೇಕ ವಿದೇಶಿ ಹಣ್ಣುಗಳನ್ನು ಕೂಡ ಪ್ರದರ್ಶನದಲ್ಲಿಡಲಾಗಿದೆ. ಜನರು ಭಿನ್ನ ವಿಭಿನ್ನ ತಳಿಯ ದೇಶಿ, ವಿದೇಶಿ ಹಣ್ಣುಗಳನ್ನು ನೋಡುವದರ ಜೊತೆಗೆ ಅವುಗಳನ್ನು ಖರೀದಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ. ಆದರೆ ಪ್ರದರ್ಶನದ ಆಕರ್ಷಣೆ ಹೆಚ್ಚಿಸಿರೋದು ಜಗತ್ತಿನ ದುಬಾರಿ ದ್ರಾಕ್ಷಿ ಅಂತ ಪ್ರಸಿದ್ಧವಾಗಿರುವುದು ರೂಬಿ ರೋಮನ್ ದ್ರಾಕ್ಷಿ.

[t4b-ticker]
error: Content is protected !!