ಗಡಿಯಲ್ಲಿ ತಾರಕಕ್ಕೇರಿದ ಯುದ್ಧದ ಭೀತಿ; ಗಲ್ಫ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಕಾದಿದೆಯಾ ದೊಡ್ಡ ಆತಂಕ?

Picture of Savistara

Savistara

Bureau Report

ರಿಯಾದ್:ಸೌದಿ ಅರೇಬಿಯಾ ಹಾಗೂ ಯೆಮೆನ್‌ನ ಹೌತಿ ಬಂಡುಕೋರರ ನಡುವೆ ಗಡಿಭಾಗದಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಸೌದಿಯಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಮುನ್ನೆಚ್ಚರಿಕೆ ಮಾರ್ಗಸೂಚಿಯನ್ನು (Advisory) ಹೊರಡಿಸಿದೆ.​

ಭಾರತದ 4 ಪ್ರಮುಖ ಏರ್‌ಲೈನ್ಸ್ ವಿಮಾನ ಹಾರಾಟ ರದ್ದು:ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಹಾಗೂ ಅಕಾಸಾ ಏರ್ ಸಂಸ್ಥೆಗಳು ರಿಯಾದ್‌ಗೆ ಸಂಪರ್ಕ ಕಲ್ಪಿಸುವ ತಮ್ಮ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ಅಕ್ಟೋಬರ್ 17ರವರೆಗೆ ತಾತ್ಕಾಲಿಕವಾಗಿ ಸಂಪೂರ್ಣ ರದ್ದುಗೊಳಿಸಿವೆ. ಇದರಿಂದಾಗಿ ಸಾವಿರಾರು ಅನಿವಾಸಿ ಭಾರತೀಯರ ಪ್ರಯಾಣಕ್ಕೆ ಅಡಚಣೆ ಉಂಟಾಗಿದೆ.​

ನೆರೆಯ ದೇಶಗಳ ಮೂಲಕ ಮರಳಲು ಸಲಹೆ:ತುರ್ತು ಪರಿಸ್ಥಿತಿಯಲ್ಲಿ ದೇಶ ತೊರೆಯಲು ಬಯಸುವ ಭಾರತೀಯರು ನೆರೆಯ ಗಲ್ಫ್ ರಾಷ್ಟ್ರಗಳಾದ ಕತಾರ್ ಅಥವಾ ಬಹ್ರೇನ್ ವಿಮಾನ ನಿಲ್ದಾಣಗಳ ಮಾರ್ಗವಾಗಿ ಲಭ್ಯವಿರುವ ವಿಮಾನಗಳನ್ನು ಬಳಸಿಕೊಂಡು ಭಾರತಕ್ಕೆ ಮರಳಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ. ಆದರೆ, ಈ ಪರ್ಯಾಯ ಮಾರ್ಗಗಳನ್ನು ಬಳಸುವಾಗ ಆಯಾ ದೇಶಗಳ ವೀಸಾ ನಿಯಮಗಳು ಹಾಗೂ ಪ್ರಯಾಣದ ಷರತ್ತುಗಳು ಅನ್ವಯವಾಗಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

​ಸೌದಿ ಏರ್‌ಲೈನ್ಸ್ ಕಾರ್ಯಾಚರಣೆ ಮುಂದುವರಿಕೆ:ಪ್ರಸ್ತುತ ಸೌದಿಯಾ ಏರ್‌ಲೈನ್ಸ್ ಸಂಸ್ಥೆಯು ದಮ್ಮಾಮ್, ಜೆಡ್ಡಾ ಹಾಗೂ ಮದೀನಾ ನಗರಗಳಿಂದ ತನ್ನ ಎಂದಿನ ವಿಮಾನ ಸೇವೆಯನ್ನು ಕಾಯ್ದುಕೊಂಡಿದೆ. ಜೊತೆಗೆ ಫ್ಲೈನಾಸ್ (Flynas) ಸಂಸ್ಥೆಯೂ ದಮ್ಮಾಮ್‌ನಿಂದ ವಿಮಾನಗಳನ್ನು ಓಡಿಸುತ್ತಿದೆ. ಹೀಗಾಗಿ ಪ್ರಯಾಣ ಯೋಜಿಸುವ ಮುನ್ನ ನಾಗರಿಕರು ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿಯ ಮೂಲಕ ವೇಳಾಪಟ್ಟಿಯ ನೈಜ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!