ಪೋಪ್‌ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ: ಹೊಸ ಸಂತರ ನೇಮಕ ಚರ್ಚೆ

Picture of Savistara

Savistara

Bureau Report

ರೋಮ್: ನ್ಯುಮೋನಿಯ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ವ್ಯಾಟಿಕನ್ ಆಡಳಿತದ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿ, ನೂತನ ಸಂತರ ನಿಯೋಜನೆ ಕುರಿತು ಚರ್ಚಿಸಿದರು.

ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿ ಇರುವಾಗಲೇ ಈ ಭೇಟಿ ಹಾಗೂ ಚರ್ಚೆ ನಡೆದಿದೆ.ಈ ಮಧ್ಯೆ, ವ್ಯಾಟಿಕನ್ ಮಧ್ಯಾಹ್ನ ಬಿಡುಗಡೆ ಮಾಡಿದ ವಾರ್ತಾಪತ್ರದ ಪ್ರಕಾರ ಇಬ್ಬರಿಗೆ ಸಂತ ಸ್ಥಾನ ಹಾಗೂ ಇತರ ಐವರಿಗೆ ದೀಕ್ಷೆ ನೀಡುವ ಪ್ರಸ್ತಾವಕ್ಕೆ ಪೋಪ್ ಒಪ್ಪಿಗೆ ಸೂಚಿಸಿದ್ದಾರೆ.ಕಾರ್ಡಿನಾಲ್ ಪಿಯೆಟ್ರೊ ಪಾರೊಲಿನ್, ಅರ್ಚ್‌ಬಿಷಪ್ ಎಸ್ಸಾರ್ ಪೆನಾ ಪರ್ರಾ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಆಗಿದ್ದರು. ‘ಪೋಪ್ ರಾತ್ರಿ ಪೂರಾ ನೆಮ್ಮದಿಯಿಂದ ನಿದ್ರಿಸಿದರು’ ಎಂದು ವ್ಯಾಟಿಕನ್ ವಾರ್ತಾಪತ್ರದಲ್ಲಿ ತಿಳಿಸಿದೆ.

ಪೋಪ್ ಸ್ಥಿತಿ ಗಂಭೀರವಾಗಿ ಇರುವಂತೆಯೇ ಸೋಮವಾರ ಸಂಜೆ ರೋಮ್‌ನ ಸೇಂಟ್ ಪೀಟ‌ರ್ ಸ್ಟೈರ್‌ನಲ್ಲಿ ಸೇರಿದ್ದ ಸಾವಿರಾರು ಮಂದಿ, ಪೋಪ್ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!