ಗೋಸೇವಾ ಗತಿ ವಿಧಿ ಯಿಂದ ಮಾರ್ಚ್ 15 ರಂದು ಸುಳ್ಯಕ್ಕೆ ನಂದಿ ರಥಯಾತ್ರೆ| ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ, ಕಾರ್ಯಾಧ್ಯಕ್ಷರಾಗಿ ಶ್ರೀ ಪತಂಜಲಿ ಭಾರಧ್ವಾಜ

Picture of Savistara

Savistara

Bureau Report

ಸುಳ್ಯ:ಗೋ ಸೇವಾ ಗತಿವಿಧಿ ಕರ್ನಾಟಕ ಮತ್ತು ರಾಧ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ನಂದಿ ರಥಯಾತ್ರೆ ರಾಜ್ಯಾದ್ಯಂತ ಸಂಚಾರಿಸಲಿದ್ದು ಈ ಹಿನ್ನೆಲೆಯಲ್ಲಿ ಮಾರ್ಚ್ 15 ರಂದು ಸುಳ್ಯಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಮಾ.5 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅರೆಸ್ಸೆಸ್ ತಾಲೂಕು ಸಂಘಚಾಲಕ್ ತಳೂರು ಚಂದ್ರಶೇಖರ,ಅರೆಸ್ಸೆಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್,ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ರಥ ಯಾತ್ರೆ ಯ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ರಥಯಾತ್ರೆ ಸ್ವಾಗತ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ ಮತ್ತು ಕಾರ್ಯಾಧ್ಯಕ್ಷರಾಗಿ ಪತಂಜಲಿ ಭಾರದ್ವಾಜ ರವರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್ ಅಂಗಾರ, ಡಾ. ಕೇಶವ ಸುಳ್ಳಿ, ಸುಧಾಕರ ಕಾಮತ್, ಡಾ. ಪುನೀತ್ ಸೋಣಂಗೇರಿ, ಡಾ.ನಿತಿನ್ ಪ್ರಭು,

ಡಾ.ಸೂರ್ಯನಾರಾಯಣ ಬೆಳ್ಳಾರೆ,

ಡಾ. ಮೇಘಶ್ರೀ ಕಳಂಜ,ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಸುಳ್ಯ ಮತ್ತು ವಿಕ್ರಂ ಅಡ್ಪಂಗಾಯ, ಕೋಶಾಧಿಕಾರಿ ಯಾಗಿ ಸನತ್ ಪಿ.ಆರ್ ಮತ್ತು ಸಮಿತಿಯ ಗೌರವ ಸದಸ್ಯರನ್ನು ಘೋಷಿಸಲಾಯಿತು.ಈ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಯಸ್ ಅಂಗಾರ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಬಿಜೆಪಿ ಪ್ರಮುಖರಾದ ಹರೀಶ್ ಕಂಜಿಪಿಲಿ,ಉದ್ಯಮಿ ಸುಧಾಕರ ಕಾಮತ್,

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಆರ್ ಕೆ ಭಟ್, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಜಯಪ್ರಕಾಶ್ ಮೊಗ್ರ, ಕುಸುಮಾಧರ ಎ.ಟಿ, ಹೇಮಂತ್ ಕಂದಡ್ಕ, ಹೇಮಂತ್ ಮಠ, ಶಿವಪ್ರಸಾದ್ ಉಗ್ರಾಣಿ ಮನೆ, ಕಿಶನ್ ಜಬಳೆ,ರಜತ್ ಅಡ್ಕಾರು, ಜಗದೀಶ್ ಡಿ.ಪಿ ಮತ್ತು ಸಂಘಟನೆ ಯ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.ನಂದಿ ರಥಯಾತ್ರೆ ತಾಲೂಕು ಸಂಚಾಲಕ ಅವಿನಾಶ್ ಕುರುಂಜಿ ಮತ್ತು ಸಹ ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ ಪೂರ್ವಭಾವಿ ಸಭೆ ಸಂಯೋಜಿಸಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!