ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ

Picture of Savistara

Savistara

Bureau Report

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಈ ಮೂಲಕ ಭಾರತ ಎರಡನೇ ಸಲ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. 2013ರಲ್ಲೂ ಭಾರತ ಈ ಟ್ರೋಫಿ ಜಯಿಸಿತ್ತು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಪೇರಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಓವರ್ ಬಾಕಿ ಇರುವಾಗಲೇ ಜಯ ಸಾಧಿಸಿತು.ನ್ಯೂಜಿಲೆಂಡ್‌ ಪರ ಅತಿ ಹೆಚ್ಚು ರನ್ ಕಾಣಿಕೆ ನೀಡಿದ್ದು ಡೇರಿಲ್ ಮಿಚೆಲ್. ಅವರು 101 ಎಸೆತಗಳಲ್ಲಿ 63 ರನ್ ಗಳಿಸಿದರು. ಗ್ಲೆನ್ ಫಿಲಿಪ್ ನಿಧಾನಗತಿಯ 34 ರನ್ ಬಾರಿಸಿದರು. ರಚಿನ್‌ ರವೀಂದ್ರ 37 ರನ್, ಮಿಚೆಲ್ ಬ್ರೇಸ್‌ವೆಲ್ ಅರ್ಧ ಶತಕ ಗಳಿಸಿದರು.

ಭಾರತದ ಪರ ರೋಹಿತ್ ಶರ್ಮಾ 76, ಗಿಲ್ 31, ಅಯ್ಯರ್ 48, ಅಕ್ಷ‌ರ್ 29 ರನ್‌ಗಳಿಸಿದರು. ರಾಹುಲ್ 34 ರನ್‌ಗಳಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!