ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ಫೋಟೊಗೆ ಪೋಸ್‌ ಕೊಟ್ಟ ಸುನಿತಾ, ಬುಚ್

Picture of Savistara

Savistara

Bureau Report

ಫ್ಲಾರಿಡಾ(ಅಮೆರಿಕ): 9 ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ನೋರ್ ಇಂದು ಭೂಮಿಗೆ ಪ್ರಯಾಣ ಬೆಳೆಸಿದ್ದಾರೆ. ಅನ್‌ಡಾಕ್ ಪ್ರಕ್ರಿಯೆ ವಿಡಿಯೊವನ್ನು ನಾಸಾ ಸಾಮಾಜಿಕ

Advertisement

ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬಾಹ್ಯಾಕಾಶ ನೌಕೆ ‘ಡ್ರಾಗನ್’ ಪ್ರವೇಶಿಸುವ ಮುನ್ನ ಇಬ್ಬರು ಗಗನಯಾತ್ರಿಗಳು ಫೋಟೊಗೆ ಪೋಸ್ ನೀಡಿದ್ದಾರೆ. ಇಂದು ಬೆಳಿಗ್ಗೆ 10.35ಕ್ಕೆ ಬಾಹ್ಯಾಕಾಶ ನಿಲ್ದಾಣದಿಂದ ಬಾಹ್ಯಾಕಾಶ ನೌಕೆ ‘ಡ್ರಾಗನ್’ ಬೇರ್ಪಟ್ಟಿದ್ದು, ಬುಧವಾರ ಬೆಳಗಿನ ಜಾವ ಸುಮಾರು 3.27 ಸುಮಾರಿಗೆ ಭೂಮಿಗೆ ತಲುಪಲಿದೆ ಎಂದು ನಾಸಾ ತಿಳಿಸಿದೆ.ಸ್ಪೇಸ್‌ಎಕ್ಸ್‌ನ ‘ಡ್ರಾಗನ್’ ನೌಕೆ ಭಾನುವಾರ ಐಎಸ್‌ಎಸ್ ತಲುಪಿತ್ತು.ಕಳೆದ ವರ್ಷ ಜೂನ್ 5ರಂದು ಸುನಿತಾ ಹಾಗೂ ಬುಚ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದರು.

Advertisement
News Updates

ಐವರ್ನಾಡು – ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಮಂಜೂರಾತಿಗೆ ಮನವಿ: ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಒತ್ತಾಯ | ಸರ್ವೆ ಕಾರ್ಯ ಪೂರ್ಣ, ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಕೋರಿಕೆ

[t4b-ticker]
error: Content is protected !!