ತುಂಬೆ ಡ್ಯಾಂ ಒಳಹರಿವು ಸ್ಥಗಿತ; ಮಳೆ ಬಾರದಿದ್ದರೆ ಮಂಗಳೂರಿಗರಿಗೆ ನೀರಿನ ಸಮಸ್ಯೆ ಖಂಡಿತ!

Picture of Savistara

Savistara

Bureau Report

ಮಂಗಳೂರು ಮಹಾನಗರ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂಗೆ ಒಳಹರಿವು ಸ್ಥಗಿತಗೊಂಡಿದ್ದು, ಭಾನುವಾರ ನೀರಿನ ಮಟ್ಟ 5.75. ಮೀ.ಗೆ ಇಳಿಕೆಯಾಗಿದೆ. ಮಳೆ ಆರಂಭವಾಗುವ ವರೆಗೆ ಮಿತ ನೀರಿನ ಬಳಕೆ ಮೂಲಕ ಪ್ರಸ್ತುತ ಬೇಸಿಗೆಯನ್ನು ಎದುರಿಸಬೇಕಾಗಿದೆ. ಒಂದೆಡೆ ಬಿಸಿಲಿನ ಬೇಗೆ, ಇನ್ನೊಂದೆಡೆ ಹೆಚ್ಚುತ್ತಿರುವ ನೀರಿನ ಬೇಡಿಕೆಯಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದ 24 ಗಂಟೆಯೂ ನೀರನ್ನು ಪಂಪಿಂಗ್ ಮಾಡಲಾಗುತ್ತಿದೆ. ಒಂದು ವಾರದಿಂದೀಚೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನಕ್ಕೆ 8ರಿಂದ 10 ಸೆಂ.ಮೀ.ನಷ್ಟು ಇಳಿಕೆಯಾಗುತ್ತಿದೆ. ತುಂಬೆ ಡ್ಯಾಂನಲ್ಲಿ 6 ಮೀಟರ್ ವರೆಗೆ ನೀರು ಶೇಖರಣೆಗೆ ಡ್ಯಾಂ ಬಾಗಿಲು ಹಾಕಲಾಗಿದೆ.

ಮಂಗಳೂರು: ಮಂಗಳೂರು ಮಹಾನಗರ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂಗೆ ಒಳಹರಿವು ಸ್ಥಗಿತಗೊಂಡಿದ್ದು, ಭಾನುವಾರ ನೀರಿನ ಮಟ್ಟ 5.75. ಮೀ.ಗೆ ಇಳಿಕೆಯಾಗಿದೆ. ಮಳೆ ಆರಂಭವಾಗುವ ವರೆಗೆ ಮಿತ ನೀರಿನ ಬಳಕೆ ಮೂಲಕ ಪ್ರಸ್ತುತ ಬೇಸಿಗೆಯನ್ನು ಎದುರಿಸಬೇಕಾಗಿದೆ. ಒಂದೆಡೆ ಬಿಸಿಲಿನ ಬೇಗೆ, ಇನ್ನೊಂದೆಡೆ ಹೆಚ್ಚುತ್ತಿರುವ ನೀರಿನ ಬೇಡಿಕೆಯಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದ 24 ಗಂಟೆಯೂ ನೀರನ್ನು ಪಂಪಿಂಗ್ ಮಾಡಲಾಗುತ್ತಿದೆ.

ಒಂದು ವಾರದಿಂದೀಚೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನಕ್ಕೆ 8ರಿಂದ 10 ಸೆಂ.ಮೀ.ನಷ್ಟು ಇಳಿಕೆಯಾಗುತ್ತಿದೆ. ತುಂಬೆ ಡ್ಯಾಂನಲ್ಲಿ 6 ಮೀಟರ್ ವರೆಗೆ ನೀರು ಶೇಖರಣೆಗೆ ಡ್ಯಾಂ ಬಾಗಿಲು ಹಾಕಲಾಗಿದೆ. ಆದರೆ ನೀರಿನ ಬೇಡಿಕೆ ಹೆಚ್ಚಾಗಿದ್ದು, ನೀರಿನ ಒಳಹರಿವು ಇಲ್ಲದ ಕಾರಣ ಮಾರ್ಚ್ 19ರಂದು ನೀರಿನ ಮಟ್ಟ 5.40 ಮೀ.ನಷ್ಟು ಇಳಿಕೆಯಾಗಿತ್ತು. ಬಳಿಕ ಜಕ್ರಿಬೆಟ್ಟು ಡ್ಯಾಂನಿಂದ ನೀರು ಬಿಟ್ಟಿದ್ದು, 5.85 ಮೀ. ಏರಿಕೆಯಾಗಿತ್ತು. ಭಾನುವಾರ ಮತ್ತೆ 5.75ಮೀ.ಗೆ ಇಳಿಕೆಯಾಗಿದೆ.

ಪ್ರತಿನಿತ್ಯ ಮಂಗಳೂರು ಮಹಾನಗರಕ್ಕೆ 162 ಎಂಎಲ್‌ ಡಿ ನೀರು ಸರಬರಾಜಾಗುತ್ತಿದ್ದು, ಇದೇ ರೀತಿ ಬಿರುಬಿಸಿಲು ಮುಂದುವರಿದು ಮಳೆ ಬಾರದಿದ್ದರೆ ನೀರಿನ ಆತಂಕ ತಪ್ಪಿದ್ದಲ್ಲ. ಈ ಕಾರಣದಿಂದ ನಗರವಾಸಿಗಳು ಕೂಡಲೇ ನೀರಿನ ಬಳಕೆ ಬಗ್ಗೆ ಮುಂಜಾಗ್ರತೆ ವಹಿಸಲೇ ಬೇಕಾಗಿದೆ. ಗ್ರೀನ್ ಕೋ ಸಂಸ್ಥೆಯ ಎಎಂಆರ್ ಪವರ್ ಪ್ರಾಜೆಕ್ಟ್ ಡ್ಯಾಂನಲ್ಲಿ ಸಮುದ್ರ ಮಟ್ಟದಿಂದ 17 ಮೀಟರ್ ನೀರಿದ್ದು, ಅದರಲ್ಲಿ ಸದ್ಯ ನೀರಿನ ಮಟ್ಟ ಉತ್ತಮವಾಗಿದೆ.

ತುಂಬೆ ಡ್ಯಾಂನಲ್ಲಿ 5.75 ಮೀಟರ್ ನೀರಿದೆ. ಕಳೆದ ಬಾರಿ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಗಣನೀಯ ಕುಸಿತ ಕಂಡಾಗ ಹರೇಕಳ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರನ್ನು 4 ಪಂಪ್‌ಗಳ ಸಹಾಯದಿಂದ ಮೇಲಕ್ಕೆತ್ತಿ ತುಂಬೆ ಡ್ಯಾಂಗೆ ಹಾಕಲಾಗಿತ್ತು. ಮೇ ತಿಂಗಳಾಂತ್ಯಕ್ಕೆ ನೀರಿನ ಸಮಸ್ಯೆ ಎದುರಾದರೆ ಈ ಬಾರಿಯೂ ಪಂಪ್‌ಗಳ ಬಳಕೆ ಅನಿವಾರ್ಯ ಬರಬಹುದು ಎನ್ನುತ್ತಾರೆ ಅಧಿಕಾರಿಗಳು.

ನೀರು ಮಿತವಾಗಿ ಬಳಸೋಣ

ಮಂಗಳೂರು ಮಹಾನಗರದ ಸುರತ್ಕಲ್, ಕೂಳೂರು, ಕೋಡಿಕಲ್, ಆಕಾಶಭವನ, ಕಾಟಿಪಳ್ಳ, ಕೃಷ್ಣಾಪುರ, ಬೆಂಗರೆ ವ್ಯಾಪ್ತಿಯಲ್ಲಿ ಈಗಲೇ ಕುಡಿಯುವ ನೀರಿನ ಸಮಸ್ಯೆಯಿದೆ. ಒಂದು ವೇಳೆ ಮೇ ತಿಂಗಳಾಂತ್ಯ ಅಥವಾ ಜೂನ್ ಮೊದಲ ವಾರದವರೆಗೆ ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಎದುರಾಗಬಹುದು. ಆದುದರಿಂದ ಬಿರುಸಿನ ಮಳೆ ಬರುವವರೆಗೆ ಈಗಲೇ ನೀರಿನ ಮಿತಬಳಕೆಗೆ ಸಂಕಲ್ಪ ಮಾಡಬೇಕಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಜಕ್ರಿಬೆಟ್ಟು ಡ್ಯಾಂ ಹೊಸ ಸೇರ್ಪಡೆ

ಉಪ್ಪಿನಂಗಡಿಯಿಂದ ಕೆಳಭಾಗದ ಸರಳೀಕಟ್ಟೆ ಡ್ಯಾಂ ಭರ್ತಿಯಾಗಿದ್ದು, ಕೆಳಭಾಗಕ್ಕೆ ನೀರು ಹರಿದು ಎಎಂಆರ್ ಡ್ಯಾಂಗೆ ಸೇರುತ್ತಿದೆ. ಎಎಂಆರ್‌ನಿಂದ ನೀರು ಶೇಖರಣೆಯಾಗಿ ಜಕ್ರಿಬೆಟ್ಟು ಡ್ಯಾಂಗೆ ಸೇರುತ್ತದೆ. ಜಕ್ರಿಬೆಟ್ಟು ಡ್ಯಾಂನಿಂದ ಬಂಟ್ವಾಳ ಪುರಸಭೆ ವ್ಯಾಪ್ತಿಗೆ ಈ ವರ್ಷದಿಂದ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಈ ಡ್ಯಾಂನ ನೀರಿನ ಬೇಡಿಕೆಯೂ ಈ ಬಾರಿ ಅಧಿಕವಾಗಿದೆ. ಜಕ್ರಿಬೆಟ್ಟುವಿನಿಂದ ಕೆಳಭಾಗಕ್ಕೆ ನೀರು ಬಿಟ್ಟರೆ ಮಾತ್ರ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಏರಿಕೆಯಾಗಲಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!