ಏ.೨ರಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದ್ದು ಅದರ ಪ್ರಕಾರ ಐಟಿಸಿ (ಎಚ್‌ಎಸ್) ಕೋಡ್ ೦೮೦೨೮೦೯೦ ಮತ್ತು ೨೦೦೮೧೯೨೦ ಅಡಿಯಲ್ಲಿ ಬರುವ ಹುರಿದ ಅಡಿಕೆಯನ್ನು “ಉಚಿತ”ದಿಂದ “ನಿಷೇಧಿತ” ಎಂದು ಪರಿಷ್ಕರಿಸಿ ವರ್ಗೀಕರಿಸಲಾಗಿದೆ ಈ ಹಿನ್ನೆಲೆಯಲ್ಲಿ ಅಡಿಕೆ ಬೆಲೆ ಏರಿಕೆಗೊಂಡಿದ್ದು ಕ್ಯಾಂಪ್ಕೋ ತನ್ನ ಧಾರಣೆ ಯಲ್ಲಿ ಹತ್ತು ರೂಪಾಯಿ ಹೆಚ್ಚಿಸಿದೆ.ನಿನ್ನೆ ಡಬಲ್ ಚೋಲ್ ಅಡಿಕೆ 495 ಇಂದು 500 ರೂಪಾಯಿ, ಸಿಂಗಲ್ ಚೋಲ್ 475 ರಿಂದ 485 ಮತ್ತು ಹೊಸ ಅಡಿಕೆ 430 ರಿಂದ 440 ರೂಪಾಯಿ ಗೆ ಕ್ಯಾಂಪ್ಕೋ ಧಾರಣೆ ಯಲ್ಲಿ ಹೆಚ್ಚಿಸಿದೆ ಇದೇ ವೇಳೆ ಪಟೋರ,ಕರಿಗೋಟು ಧಾರಣೆಯಲ್ಲೂ ಏರಿಕೆಯಾಗಿದ್ದು ಅಡಿಕೆ ಕೃಷಿಕರಲ್ಲಿ ಸಂತಸ ಮೂಡಿದೆ. ಈ ಹಿಂದೆ ಹುರಿದ ಅಡಿಕೆ ವಿಚಾರವಾಗಿ ಕ್ಯಾಂಪ್ಕೋ ಸಂಸ್ಥೆ ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು.

















































