ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ “ಆಪರೇಷನ್ ಸಿಂಧೂರ್’ ಸೇನಾ ಕಾರ್ಯಾಚರಣೆ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಜಗತ್ತಿಗೆ ತಿಳಿಸಲು ರಚಿತವಾದ ಏಳು ಸರ್ವಪಕ್ಷ ಸಂಸದೀಯ ನಿಯೋಗಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪಿವೆ. ಈ ನಿಯೋಗಗಳು ಭಾರತದ ದೃಷ್ಟಿಕೋನವನ್ನು ಜಾಗತಿಕ ವೇದಿಕೆಯಲ್ಲಿ ಸಮರ್ಥವಾಗಿ ಮಂಡಿಸುತ್ತಿವೆ.
ನ್ಯೂಯಾರ್ಕ್, ಮೇ 26: ಕಾಶ್ಮೀರದ ಪಹಲ್ಲಾಮ್‌ನಲ್ಲಿನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ “ಆಪರೇಷನ್ ಸಿಂಧೂರ್’ ಸೇನಾ ಕಾರ್ಯಾಚರಣೆ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಜಗತ್ತಿಗೆ ತಿಳಿಸಲು ರಚಿತವಾದ ಏಳು ಸರ್ವಪಕ್ಷ ಸಂಸದೀಯ ನಿಯೋಗಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪಿವೆ. ಈ ನಿಯೋಗಗಳು ಭಾರತದ ದೃಷ್ಟಿಕೋನವನ್ನು ಜಾಗತಿಕ ವೇದಿಕೆಯಲ್ಲಿ ಸಮರ್ಥವಾಗಿ ಮಂಡಿಸುತ್ತಿವೆ.
ಅಮೆರಿಕದ ನ್ಯೂಯಾರ್ಕ್‌ಗೆ ತೆರಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು, ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಅಮೆರಿಕದ ರಾಜಕೀಯ ನಾಯಕರು ಮತ್ತು ವಿದೇಶಾಂಗ ನೀತಿ ತಜ್ಞರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ. ನ್ಯೂಯಾರ್ಕ್‌ನಲ್ಲಿ ಆಯೋಜಿತ ಸಭೆಯಲ್ಲಿ ಮಾತನಾಡಿದ ಶಶಿ ತರೂರ್, “ಭಯೋತ್ಪಾದನೆ ವಿರುದ್ಧ ಜಗತ್ತು ಒಗ್ಗಟ್ಟಿನಿಂದ ಹೋರಾಡಬೇಕು. ಭಯೋತ್ಪಾದಕರಿಗೆ ಆಶ್ರಯ ನೀಡುವ ರಾಷ್ಟ್ರಗಳನ್ನು ಗುರುತಿಸಿ, ಅವುಗಳನ್ನು ಜಾಗತಿಕ ವೇದಿಕೆಯಿಂದ ಪ್ರತ್ಯೇಕಿಸುವುದು ತುರ್ತು ಅಗತ್ಯ” ಎಂದು ಪಾಕಿಸ್ತಾನದ ವಿರುದ್ಧ ತೀಕ್ಷ್ಮವಾಗಿ ವಾಗ್ದಾಳಿ ನಡೆಸಿದರು.
ಪಹಲ್ಗಾಮ್ ದಾಳಿಯ ಗಂಭೀರತೆ
ತರೂರ್, ಪಹಲ್ಲಾಮ್ ದಾಳಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಕೊಲೆ ಮಾಡಲಾಗಿದ್ದು, ಇದು ಭಾರತದಲ್ಲಿ ಆಕ್ರೋಶವನ್ನು ಹುಟ್ಟುಹಾಕುವ ಉದ್ದೇಶದಿಂದ ನಡೆದ ಕೃತ್ಯ ಎಂದು ತಿಳಿಸಿದರು. ಆದರೆ, ಜಮ್ಮು ಕಾಶ್ಮೀರ ಸೇರಿದಂತೆ ಸಮಗ್ರ ಭಾರತೀಯರು ಈ ಸಂಕಷ್ಟದ ಸಂದರ್ಭದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ ಎಂದು ಒತ್ತಿ ಹೇಳಿದರು. ಈ ದಾಳಿಗೆ ಪ್ರತಿಕ್ರಿಯೆಯಾಗಿ, “ಆಪರೇಷನ್ ಸಿಂಧೂರ್” ಮೂಲಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿತು ಎಂದು ವಿವರಿಸಿದರು.
ಲಷ್ಕರ್-ಎ-ತೋಯ್ದಾದ ಒಡಂಬಡಿಕೆ ಪಹಲ್ಲಾಮ್ ದಾಳಿಯನ್ನು ಅಮೆರಿಕ ಮತ್ತು ವಿಶ್ವಸಂಸ್ಥೆ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿರುವ ಲಷ್ಕರ್-ಎ-ತೋಯ್ದಾ ಮತ್ತು ಅದರ ಅಂಗಸಂಸ್ಥೆ ದಿ ರೆಸಿಸ್ಟನ್ಸ್ ಫೋರ್ಸ್ (ಟಿಆರ್‌ಎಫ್) ನಡೆಸಿವೆ. ಈ ಸಂಘಟನೆಯ ಪ್ರಮುಖರು ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಿರುವುದು ರಹಸ್ಯವೇನಲ್ಲ ಎಂದು ತರೂರ್ ಗುಡುಗಿದರು. ಪಾಕಿಸ್ತಾನದ ಜಂಟಿ ತನಿಖೆಯ ನಾಟಕವನ್ನು ಯಾವ ರಾಷ್ಟ್ರವೂ ಒಪ್ಪದು ಎಂದು ತರೂರ್ ತಿರಸ್ಕರಿಸಿದರು.
ನಿಯೋಗದ ಉದ್ದೇಶ
ನ್ಯೂಯಾರ್ಕ್‌ಗೆ ತೆರಳಿರುವ ನಿಯೋಗದಲ್ಲಿ ಶಶಿ ತರೂರ್ ಜೊತೆಗೆ ಶಂಭವಿ ಚೌಧರಿ, ಸರ್ಫರಾಜ್ ಅಹ್ಮದ್, ಜಿ.ಎಂ. ಹರೀಶ್ ಬಾಲಯೋಗಿ, ಶಶಾಂಕ್ ಮಣಿ ತ್ರಿಪಾಠಿ, ತೇಜಸ್ವಿ ಸೂರ್ಯ, ಭುವನೇಶ್ವರ್ ಕೆ. ಲತಾ, ಮಲ್ಲಿಕಾರ್ಜುನ್ ದೇವಡ, ಮತ್ತು ತರಂಜಿತ್ ಸಿಂಗ್ ಸಂಧು ಭಾಗವಹಿಸಿದ್ದಾರೆ. ಈ ನಿಯೋಗವು ಅಮೆರಿಕದ ರಾಜಕೀಯ ನಾಯಕರು, ವಿದೇಶಾಂಗ ತಜ್ಞರು, ಮಾಧ್ಯಮಗಳು, ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಭಯೋತ್ಪಾದನೆ ವಿರುದ್ಧ ಭಾರತದ ಧೃಡ ನಿಲುವನ್ನು ಮಂಡಿಸುತ್ತಿದೆ.
9/11 ಸ್ಮಾರಕಕ್ಕೆ ಭೇಟಿ
ಈ ಸಂದರ್ಭದಲ್ಲಿ, ಶಶಿ ತರೂರ್ ಮತ್ತು ಸರ್ವಪಕ್ಷ ನಿಯೋಗದ ಸದಸ್ಯರು ನ್ಯೂಯಾರ್ಕ್ 9/11 ಭಯೋತ್ಪಾದಕ ದಾಳಿಯ ಸ್ಮಾರಕಕ್ಕೆ ಭೇಟಿ ನೀಡಿ, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.












































