ಉಗ್ರ ಪಾಕ್ ವಿರುದ್ಧ ಭಾರತಕ್ಕೆ ಮತ್ತೆ 5 ದೇಶ ಬೆಂಬಲ

Picture of Savistara

Savistara

Bureau Report

ಪಾಕ್ ಉಗ್ರ ಕೃತ್ಯ ಸಾರಲು ಹೊರಟಿದ್ದ ನಿಯೋಗಗಳಿಗೆ ಲಭಿಸುತ್ತಿದೆ ಭಾರೀ ಯಶಸ್ಸು

ಹೊಸದಿಲ್ಲಿ: ಪಾಕಿಸ್ಥಾನದ ಉಗ್ರ ಕೃತ್ಯವನ್ನು ಜಗತ್ತಿಗೆಸಾರಲು ಭಾರತದಿಂದ ಹೊರಟಿರುವ ಸರ್ವಪಕ್ಷ ನಿಯೋಗಗಳು ತಮ್ಮ ಕಾರ್ಯದಲ್ಲಿ ಭಾರೀ ಯಶಸ್ಸು ಸಾಧಿಸಿವೆ. ಉಗ್ರ ಪಾಕಿಸ್ಥಾನದ ವಿರುದ್ದದ ಭಾರತದ ಹೋರಾಟಕ್ಕೆ ಮತ್ತೆ ಐದು ದೇಶ ಗಳು ಬೆಂಬಲ ಸೂಚಿಸಿವೆ.ಉಗ್ರವಾದದ ವಿರುದ್ಧದ ಭಾರತದ ನಿಲುವಿಗೆ ಕತಾರ್, ಗಯಾನಾ, ದ. ಕೊರಿಯಾ, ಫ್ರಾನ್ಸ್ ಮತ್ತು ಸ್ಟೋವೇನಿಯಾ ಕೂಡ ಬೆಂಬಲ ವ್ಯಕ್ತಪಡಿಸಿವೆ. ರವಿಶಂಕರ್ ಪ್ರಸಾದ್ ನೇತೃತ್ವದ 9 ಸದಸ್ಯರ ನಿಯೋಗವು ಯುರೋಪ್‌ನಲ್ಲಿ 6 ದಿನಗಳ ಪ್ರವಾಸ ಆರಂಭಿ ಸಿದ್ದು, ಸೋಮವಾರ ಫ್ರಾನ್ಸ್ ನಾಯಕತ್ವವನ್ನು ಭೇಟಿ ಮಾಡಿದೆ. ಈ ವೇಳೆ ಭಾರತದ ನಿಲುವಿಗೆ ಬೆಂಬಲ ದೊರೆತಿದೆ. ಉಗ್ರವಾದವನ್ನು ತೊಡೆದು ಹಾಕಲು ನೆರವು ನೀಡುವುದಾಗಿ ಫ್ರಾನ್ಸ್ ಹೇಳಿದೆ.

ಮತ್ತೂಂದೆಡೆ ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಕತಾರ್‌ನ ಸಹಾಯಕ ವಿದೇಶ ಸಚಿವರನ್ನು ಭೇಟಿ ಮಾಡಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನಿಲುವಿಗೆ ಕತಾರ್ ತನ್ನ ಬೆಂಬಲ ಘೋಷಿಸಿದೆ.ಇನ್ನೊಂದೆಡೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ಜಾರ್ಜ್ ಟೌನ್‌ನಲ್ಲಿ ಗಯಾನಾದ ನಾಯಕತ್ವನ್ನು ಭೇಟಿ ಮಾಡಿತು. ಈ ವೇಳೆ ಗಯಾನಾದ ಉಪಾಧ್ಯಕ್ಷ ಹಾಗೂ ಪ್ರಧಾನಿ ಭಾರತಕ್ಕೆ ತಮ್ಮ ಬೆಂಬಲ ಘೋಷಿಸಿದರು.ಸಂಜಯ್ ಝಾ ನೇತೃತ್ವದ ನಿಯೋಗವು ದಕ್ಷಿಣ ಕೊರಿಯಾದಲ್ಲಿದ್ದು, ಅಲ್ಲಿನ ಆಡಳಿತ ಸಹಮತ ಸೂಚಿಸಿದೆ. ಮತ್ತೂಂದೆಡೆ ಜಯ ಪಾಂಡಾ ನೇತೃತ್ವದ ನಿಯೋಗವು ಸೋಮವಾರ ಕುವೈಟ್‌ಗೆ ಬಂದಿಳಿದಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಮಂಗಳವಾರ ಪನಾಮಾಗೆ ಭೇಟಿ ನೀಡಲಿದೆ.

ಭಯೋತ್ಪಾದನೆ ವಿರುದ್ಧ ವಿಶ್ವ ಒಂದಾಗಬೇಕು

ಫ್ರಾನ್ಸ್ ಭೇಟಿಯ ವೇಳೆ ಮಾತನಾಡಿದ ಸಂಸದ ರವಿಶಂಕರ ಪ್ರಸಾದ್, ಪಾಕ್ ಸರಕಾರ ಪ್ರಾಯೋಜಿತ ಭಯೋತ್ಪಾದನೆಯ ವಿಷಯದಲ್ಲಿ ಇಡೀ ಜಗತ್ತು ಒಂದೇ ಧ್ವನಿಯಾಗಿ ಮಾತನಾಡಬೇಕು. ಭಾರತವು ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಆದರೆ ಅಮಾಯಕ ಭಾರತೀಯರ ಜೀವವನ್ನು ಬಲಿ ಕೊಡುವುದಿಲ್ಲ. ಪಹಲ್ಲಾಮ್‌ನಲ್ಲಿ ನಡೆದದ್ದು ಬರ್ಬರ ಕೃತ್ಯ. ಭಯೋತ್ಪಾದನೆ ಇಂದು ಜಾಗತಿಕ ಸಮಸ್ಯೆ, ಕ್ಯಾನ್ಸರ್‌ನಂತೆ ಹರಡಿದೆ ಎಂದಿದ್ದಾರೆ.

ಪಾಕ್‌ಗೆ ಬೆಂಬಲ ಕೊಟ್ಟರೆ ಉಗ್ರರನ್ನು ಬೆಂಬಲಿಸಿದಂತೆ

ದಕ್ಷಿಣ ಕೊರಿಯಾದಲ್ಲಿ ಮಾತನಾಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಪಾಕಿಸ್ಥಾನಕ್ಕೆ ನೀಡುವ ಯಾವುದೇ ರೀತಿಯ ಬೆಂಬಲವು ಭಯೋತ್ಪಾದಕರಿಗೆ ನೀಡಿದಂತೆ ಎಂದು ನಾವು ಜಗತ್ತಿಗೆ ಹೇಳಲು ಬಯಸುತ್ತೇವೆ. ಎ. 22ರ ಪಹಲ್ಲಾಮ್ ಭಯೋತ್ಪಾದಕ ದಾಳಿಯು ಇನ್ನು ಮುಂದೆ ಕೇವಲ ಭಾರತದ ರಾಷ್ಟ್ರೀಯ ಭದ್ರತೆಯ ವಿಷಯವಲ್ಲ; ಅದು ಈಗ ಜಾಗತಿಕ ವಿಷಯವಾಗಿದೆ ಎಂದಿದ್ದಾರೆ.

[t4b-ticker]
error: Content is protected !!