ಎಂಟು ತಿಂಗಳಲ್ಲಿ ಬೆಂಗಳೂರು ಬೀದಿಗಳಲ್ಲಿ ಎಲ್ ಇಡಿ ಲೈಟ್

Picture of Savistara

Savistara

Bureau Report

ಬೀದಿ ದೀಪಗಳನ್ನು ಎಲ್‌ಇಡಿಗೆ ಬದಲಾಯಿಸುವುದಾಗಿ ಹಲವು ವರ್ಷಗಳಿಂದ ಬಿಬಿಎಂಪಿ ಹೇಳುತ್ತಿದ್ದರೂ, ಯೋಜನೆ ಆರಂಭವಾಗಿರಲಿಲ್ಲ. ಹೊಸದಾಗಿ ಅಳವಡಿಸುತ್ತಿರುವ ಬೀದಿ ದೀಪಗಳು ಮಾತ್ರ ಎಲ್‌ಇಡಿಯಾಗಿರುತ್ತಿದ್ದವು. ಸುಮಾರು 2.85 ಲಕ್ಷ ಬೀದಿ ದೀಪಗಳು ಇನ್ನೂ ಹಳದಿ ಬೆಳಕು ಚೆಲ್ಲುವ ಸೋಡಿಯಂ ವೇಪರ್ ಲ್ಯಾಂಪ್ (ಎಸ್‌ಎಲ್‌ವಿ)ಗಳಾಗಿವೆ.

ಸಮೀಕ್ಷೆಯಂತೆ, ನಗರದಲ್ಲಿ ಈಗಾಗಲೇ 2.50 ಲಕ್ಷ ಬೀದಿ ದೀಪಗಳಿಗೆ ಎಲ್‌ಇಡಿ ಅಳವಡಿಸಲಾಗಿದೆ. ಉಳಿದ 2.85 ಲಕ್ಷ ಬೀದಿ ದೀಪಗಳನ್ನೂ ಎಸ್‌ಎಲ್‌ವಿಯಿಂದ ಎಲ್‌ಇಡಿಗೆ ಬದಲಾಯಿಸಿದರೆ ಶೇ 50ರಷ್ಟು ವಿದ್ಯುತ್‌ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಪ್ರತಿ ತಿಂಗಳು ಸುಮಾರು ₹25 ಕೋಟಿಯಷ್ಟು ವಿದ್ಯುತ್ ಬಿಲ್‌ ಪಾವತಿಸುತ್ತಿದೆ. ಇದು ಅರ್ಧದಷ್ಟಾಗುತ್ತದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಶೇ 50ರಷ್ಟು ಉಳಿತಾಯವನ್ನು ಸಾಧಿಸಿದರೆ, ಬಿಬಿಎಂಪಿ ಪ್ರತಿ ತಿಂಗಳು ವೆಚ್ಚವನ್ನು ಗುತ್ತಿಗೆದಾರರಿಗೆ ಪಾವತಿಸಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!