ಅಮರನಾಥ ಯಾತ್ರೆ ಅಧಿಕೃತವಾಗಿ ಶುರು; ಮೊದಲ ಯಾತ್ರಿಕರ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದ ಲೆಫ್ಟಿನೆಂಟ್​ ಗವರ್ನರ್

Picture of Savistara

Savistara

Bureau Report

ಇಂದು ಮುಂಜಾನೆ 4.30ಕ್ಕೆ ಬಹು ಹಂತದ ಭದ್ರತೆಯೊಂದಿಗೆ ಬೇಸ್​ ಕ್ಯಾಂಪ್​ನಿಂದ 5,892 ಮಂದಿಯನ್ನೊಳಗೊಂಡ ಅಮರನಾಥಕ್ಕೆ ಪ್ರಯಾಣ ಬೆಳೆಸಿದರು.

ಹಿಮಲಿಂಗದ ದರ್ಶನ ಪಡೆಯುವ ವಾರ್ಷಿಕ ಯಾತ್ರೆಗೆ ಮೊದಲ ಹಂತದಲ್ಲಿ 5,880 ಯಾತ್ರಿಗಳು ಜಮ್ಮುವಿನಿಂದ ಪ್ರಯಾಣ ಬೆಳೆಸಿದ್ದಾರೆ.38 ದಿನಗಳ ಕಾಲ ಸಾಗುವ ಈ ಯಾತ್ರೆಗೆ 3,880 ಮೀಟರ್​ ಎತ್ತರದ ದೇಗುಲಕ್ಕೆ ತೆರಳಲು ಯಾತ್ರಿಕರು ಎರಡು ಮಾರ್ಗಗಳ ಮೂಲಕ ತೆರಳಬಹುದಾಗಿದೆ. ಅದರಲ್ಲಿ ಸಾಂಪ್ರದಾಯಿಕ ಮಾರ್ಗವಾಗಿರುವ ಅನಂತ್​ನಾಗ್​ ಜಿಲ್ಲೆಯಲ್ಲಿನ 48 ಕಿ.ಮೀ ದೂರದ ನುನ್ವಾನ್-ಪಹಲ್ಗಾಮ್ ಮಾರ್ಗವಾದರೆ, ಎರಡನೆಯದು 14 ಕಿ.ಮೀ ದೂರದ ಗಂಡೇರ್ಬಲ್ ಜಿಲ್ಲೆಯ ಕಡಿದಾದ ಬಾಲ್ಟಾಲ್ ಮಾರ್ಗವಾಗಿದೆ. ಈ ಯಾತ್ರ ಸ್ಥಳಕ್ಕೆ ತೆರಳುವ ಸಾವಿರಾರು ಯಾತ್ರಾರ್ಥಿಗಳ ಪ್ರಮುಖ ಮಾರ್ಗ ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಾಗಿದೆ.

ಮೊದಲ ಬ್ಯಾಚ್​ನಲ್ಲಿ ಯಾತ್ರಾರ್ಥಿಗಳ ಪ್ರಯಾಣಕ್ಕೆ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​ ಮನೋಜ್​ ಸಿನ್ಹಾ ಅಧಿಕೃತವಾದ ಚಾಲನೆ ನೀಡಿದರು. ಮೊದಲ ಬ್ಯಾಚ್​ನಲ್ಲಿ 1,115 ಮಹಿಳೆಯರು, 31 ಮಕ್ಕಳು ಹಾಗೂ 16 ತೃತೀಯ ಲಿಂಗಿಗಳು ಸೇರಿದಂತೆ 5,892 ಯಾತ್ರಿಗಳು ಮುಂಜಾನೆ 4.30ಕ್ಕೆ ಬೇಸ್​ ಕ್ಯಾಂಪ್​ನಿಂದ ಪ್ರಯಾಣ ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯಾತ್ರೆಗೆ 3.31 ಲಕ್ಷ ಜನರು ಈ ಬಾರಿ ನೋಂದಣಿ ಮಾಡಿಸಿದ್ದು, ಆಗಸ್ಟ್​ 9 ರಂದು ಯಾತ್ರೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಫ್ಟಿನೆಂಟ್​ ಗವರ್ನರ್​​ ಬಿಗಿ ಭದ್ರತೆಯಲ್ಲಿ ಭಗವತಿ ನಗರ್​ ಬೇಸ್​ ಕ್ಯಾಂಪ್​ಗೆ ಬಂದು ಪೂಜೆ ಸಲ್ಲಿಸುವ ಮೂಲಕ ಎರಡು ಬೇಸ್​​ ಕ್ಯಾಂಪ್​ಗಳ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಲೆಫ್ಟಿನೆಂಟ್​ ಗವರ್ನರ್​ ಜೊತೆಯಲ್ಲಿ ಸ್ಥಳೀಯ ಶಾಸಕರು, ಉನ್ನತ ಅಧಿಕಾರಿಗಳು ಹಾಗೂ ವಿವಿಧ ಧಾರ್ಮಿಕ ಸಂಘಟನೆ ಮುಖ್ಯಸ್ಥರು ಹಾಜರಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಜಮ್ಮು ಸಿಟಿಯಲ್ಲಿ ಇಂದು ಒಂದು ದೊಡ್ಡ ಹಬ್ಬ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಉತ್ಸಾಹಭರಿತರಾಗಿದ್ದ ಯಾತ್ರಿಕರು ಅಮರನಾಥ ಯಾತ್ರೆಗೆ ಮುಂದಾಗಿದ್ದಾರೆ. ಜನರು ಎಲ್ಲಾ ಭಯೋತ್ಪಾದಕ ಬೆದರಿಕೆಗಳನ್ನು ಧಿಕ್ಕರಿಸಿ ಶಿವಲಿಂಗ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಂದು ಭಗವತಿ ನಗರ್​ ಬೇಸ್​ ಕ್ಯಾಂಪ್​ನಿಂದ ಮೊದಲ ಬ್ಯಾಚ್​ ಯಾತ್ರೆಗೆ ಚಾಲನೆ ನೀಡಲಾಯಿತು. ಶಿವ ಎಲ್ಲರಿಗೂ ಶಾಂತಿ ಮತ್ತು ಆಶೀರ್ವಾದ ನೀಡಲಿ ಎಂದು ಹಾರೈಸಿದ್ದಾರೆ.

ಯಾತ್ರೆಯ ಭದ್ರತಾ ವ್ಯವಸ್ಥೆ ಕುರಿತು ಮಾತನಾಡಿದ ಲೆಫ್ಟಿನೆಂಟ್ ಗವರ್ನರ್​, ರಾಜ್ ಭವನದಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮತ್ತು ಪೊಲೀಸ್ ಕಂಟ್ರೋಲ್ ರೂಮ್ ನಿಂದ ಯಾತ್ರೆಯ ಮೇಲೆ 24×7 ನಿಗಾ ಇಡಲಾಗುತ್ತಿದೆ. ಆರ್‌ಎಫ್‌ಐಡಿ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗಿದೆ. ಚಂದನ್ವಾರಿ ಮತ್ತು ಬಾಲ್ಟಾಲ್ ಯಾತ್ರಾ ಮೂಲ ಶಿಬಿರಗಳಲ್ಲಿ ಒಎನ್‌ಜಿಸಿ 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!