ನಾಳೆ ಭಾರತ್‌ ಬಂದ್; 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿ; ಸಾರ್ವಜನಿಕ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ।

Picture of Savistara

Savistara

Bureau Report

ವಿವಿಧ ರೈತ ಮತ್ತು ಗ್ರಾಮೀಣ ಕಾರ್ಮಿಕರ ಸಂಘಟನೆಗಳ ಸಮನ್ವಯದೊಂದಿಗೆ ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ನಾಳೆ (ಜುಲೈ 9) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.ಬ್ಯಾಂಕಿಂಗ್, ವಿಮೆ, ಅಂಚೆ ಸೇವೆಗಳಿಂದ ಹಿಡಿದು ಕಲ್ಲಿದ್ದಲು ಗಣಿಗಾರಿಕೆಯವರೆಗಿನ ಕ್ಷೇತ್ರಗಳ ಬರೋಬ್ಬರಿ 25 ಕೋಟಿಗೂ ಹೆಚ್ಚು ಕಾರ್ಮಿಕರು ನಾಳೆ ನಡೆಯಲಿರುವ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳು ಎಂದು ಒಕ್ಕೂಟಗಳು ಲೇಬಲ್ ಮಾಡಿರುವುದನ್ನು ವಿರೋಧಿಸಿ ‘ಭಾರತ್ ಬಂದ್’ ಮುಷ್ಕರ ಮಾಡಲಾಗುತ್ತಿದೆ.ಮುಷ್ಕರವು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಪ್ರತಿಭಟನೆಯಿಂದ ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಸಾರಿಗೆ, ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಕ ಅಡಚಣೆಯಾಗುವ ನಿರೀಕ್ಷೆಯಿದೆ.

ಕಾರ್ಮಿಕರ ಬೇಡಿಕೆಗಳೇನು?

ಈ ಹಿಂದೆ ಕಾಮಿರ್ಕರ ವೇದಿಕೆಯು 17 ಅಂಶಗಳ ಬೇಡಿಕೆಗಳನ್ನು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಅವರಿಗೆ ಕಳೆದ ವರ್ಷ ಸಲ್ಲಿಸಿತ್ತು. ಕೇಂದ್ರ ಸರ್ಕಾರವು ವಾರ್ಷಿಕ ಕಾರ್ಮಿಕ ಸಮಾವೇಶವನ್ನು 10 ವರ್ಷಗಳಿಂದ ಆಯೋಜಿಸಿಲ್ಲ. ಹಾಗಾಗಿ ಕಾರ್ಮಿಕ ವರ್ಗದ ಹಿತಕ್ಕೆ ವಿರುದ್ಧವಾದ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

1. ಗುತ್ತಿಗೆ ಮತ್ತು ಹೊರಗುತ್ತಿಗೆ: ಸಾರ್ವಜನಿಕ ವಲಯದಲ್ಲಿ ಗುತ್ತಿಗೆಆಧಾರಿತ ನೇಮಕಾತಿಗಳು ಕಾರ್ಮಿಕರ ಭದ್ರತೆಗೆ ಧಕ್ಕೆ ತರುತ್ತಿವೆ.

2. ಹೊಸ ನೇಮಕಾತಿಗಳ ಕೊರತೆ: ಸರ್ಕಾರಿ ಮತ್ತು ಸಾರ್ವಜನಿಕವಲಯದಲ್ಲಿ ಶಾಶ್ವತ ಉದ್ಯೋಗ ಸೃಷ್ಟಿಯ ಕೊರತೆ.

3. ಕಾರ್ಪೊರೇಟ್ ಪರ ನೀತಿಗಳು: ಸರ್ಕಾರವು ಕಾರ್ಪೊರೇಟ್ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ ಎಂಬ ಆರೋಪ.

4.ಕನಿಷ್ಠ ವೇತನ ನಿಗದಿ: ಅಸಂಘಟಿತ, ಗುತ್ತಿಗೆ ಮತ್ತು ವಿವಿಧಯೋಜನೆಗಳಡಿ ಕೆಲಸ ಮಾಡುವವರಿಗೆ ಮಾಸಿಕ ರೂ.26,000 ರಾಷ್ಟ್ರೀಯ ಕನಿಷ್ಠ ವೇತನ ನಿಗದಿಪಡಿಸುವಂತೆ ಆಗ್ರಹಿಸಲಾಗಿದೆ. ಇದು ಪ್ರಸ್ತುತದ ಜೀವನ ವೆಚ್ಚಕ್ಕೆ ಅನುಗುಣವಾಗಿರಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

5. ಕಾರ್ಮಿಕ ಸಂಹಿತೆಗಳ ರದ್ದು: ಈ ಸಂಹಿತೆಗಳು ಕಾರ್ಮಿಕರಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಒಕ್ಕೂಟಗಳು ಆರೋಪಿಸಿವೆ.

6. ಕೆಲಸದ ಸಮಯ ಹೆಚ್ಚಳ: ಕಾರ್ಮಿಕರ ಕೆಲಸದಸಮಯವನ್ನು ಹೆಚ್ಚಿಸುವ ನೀತಿಗಳನ್ನು ವಿರೋಧಿಸಲಾಗುತ್ತಿದೆ.

7. ಬೆಲೆ ಏರಿಕೆ ನಿಯಂತ್ರಣ: ಆಹಾರ, ಔಷಧ, ಕೃಷಿಉತ್ಪನ್ನಗಳಂತಹ ಅಗತ್ಯ ವಸ್ತುಗಳ ಮೇಲಿನ GST ತೆಗೆದುಹಾಕಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕವನ್ನು ఇళిసి, ಹಣದುಬ್ಬರವನ್ನು ನಿಯಂತ್ರಿಸಬೇಕು.

[t4b-ticker]
error: Content is protected !!