ವಿದೇಶಿ ಸಂಸತ್​​ ಗಳಲ್ಲಿ 17 ಬಾರಿ ಭಾಷಣ ಮಾಡಿದ ಹೆಗ್ಗಳಿಕೆ ಪಡೆದ ಪ್ರಧಾನಿ; ಇದು ಕಾಂಗ್ರೆಸ್​​​​​​​​​​​​​​ ಪ್ರಧಾನಿಗಳು ಮಾಡಿದ ಒಟ್ಟು ಭಾಷಣಗಳಿಗೆ ಸಮ!

Picture of Savistara

Savistara

Bureau Report

ಪ್ರಧಾನಿ ಮೋದಿ ನಮೀಬಿಯಾ ಸಂಸತ್​ನಲ್ಲಿ ಮಾಡಿದ ಭಾಷಣಕ್ಕೆ ಅಲ್ಲಿನ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ವಿಂಡೋಕ್, ನಮೀಬಿಯಾ: ಪ್ರಧಾನಿ ನರೇಂದ್ರ ಮೋದಿ ಬುಧವಾರ ನಮೀಬಿಯಾ ಸಂಸತ್​ ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ ಭಾಷಣಕ್ಕೆ ಅಲ್ಲಿನ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು. ಇದು ವಿದೇಶಗಳ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರ 17 ನೇ ಭಾಷಣವಾಗಿದೆ. ಈ ಮುನ್ನ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ಎಲ್ಲ ಪಿಎಂಗಳು ಮಾಡಿದ ಭಾಷಣಗಳಿಗೆ ಸಮವಾಗಿದೆ.ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯದಾಗಿ ನಮೀಬಿಯಾಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು ಅವರು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದರು ಎಂಬುದು ವಿಶೇಷ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ 7 ಬಾರಿ ವಿದೇಶಿ ಸಂಸತ್​​ ಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಉಕ್ಕಿನ ಮಹಿಳೆ ಎಂದೇ ಜನಜನಿತರಾಗಿದ್ದ ಇಂದಿರಾಗಾಂಧಿ 4 ಸಲ, ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು 3 ಬಾರಿ ವಿದೇಶಿ ಸಂಸತ್​​​​ ಉದ್ದೇಶಿಸಿ ಮಾತನಾಡಿದರೆ, ರಾಜೀವ್​ ಗಾಂಧಿ ಎರಡು ಬಾರಿ ಹಾಗೂ ನರಸಿಂಹ ರಾವ್ (1) ಸೇರಿ ಒಟ್ಟು 17 ಭಾಷಣಗಳನ್ನು ಮಾಡಿದ್ದಾರೆ.ಇನ್ನು ಎನ್ ಡಿಎ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎರಡು ಬಾರಿ ಇತರ ದೇಶಗಳ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೊರಾರ್ಜಿ ದೇಸಾಯಿ ಒಮ್ಮೆ ಬೇರೆ ರಾಷ್ಟ್ರದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು.

ಯಾವ ಯಾವ ರಾಷ್ಟ್ರದ ಸಂಸತ್​ಗಳಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ?: ಪ್ರಧಾನಿ ಮೋದಿ ಆಸ್ಟ್ರೇಲಿಯಾ, ಫಿಜಿ, ಭೂತಾನ್ ಮತ್ತು ನೇಪಾಳ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. 2015 ರಲ್ಲಿ ಮಾರಿಷಸ್, ಮಂಗೋಲಿಯಾ, ಅಫ್ಘಾನಿಸ್ತಾನ, ಯುಕೆ ಮತ್ತು ಶ್ರೀಲಂಕಾ ಸಂಸತ್​ ಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ 2016 ರಲ್ಲಿ ಮತ್ತು 2023 ರಲ್ಲಿ ಅಮೆರಿಕದ ಕಾಂಗ್ರೆಸ್​​​​​ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನು 2018 ರಲ್ಲಿ ಉಗಾಂಡಾ ಸಂಸತ್ತ ಉದ್ದೇಶಿಸಿ ಮಾತನಾಡಿದ್ದರು.2019 ರಲ್ಲಿ ಮಾಲ್ಡೀವ್ಸ್, 2019 ರಲ್ಲಿ ಗಯಾನಾ ಸಂಸತ್ತು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ವರ್ಷ, ಪ್ರಧಾನಿ ಮೋದಿ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ನಮೀಬಿಯಾ ಸಂಸತ್ತುಗಳನ್ನು ಉದ್ದೇಶಿಸಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ.

ಹೀಗಿದೆ ಬಿಜೆಪಿ ಎಕ್ಸ್​ ಪೋಸ್ಟ್​: ಈ ಸಂಬಂಧ X ಪೋಸ್ಟ್‌ ಹಂಚಿಕೊಂಡಿರುವ ಬಿಜೆಪಿ, ಪ್ರಧಾನಿ ಮೋದಿ ವಿದೇಶಿ ಸಂಸತ್ತುಗಳಿಗೆ 17 ಭಾಷಣಗಳನ್ನು ಮಾಡಿದ್ದಾರೆ ಎಂದು ಹೇಳಿದೆ. ಇದು ಹಲವಾರು ದಶಕಗಳಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪ್ರಧಾನಿಗಳು ಮಾಡಿದ ಭಾಷಣಗಳ ಒಟ್ಟು ಸಂಖ್ಯೆಗೆ ಸಮನಾಗಿದೆ. ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ನಮೀಬಿಯಾ ಸಂಸತ್ತುಗಳಲ್ಲಿ ಮಾಡಿದ ಭಾಷಣಗಳನ್ನು ಒಳಗೊಂಡಂತೆ ಪ್ರಧಾನಿ ಮೋದಿ ವಿದೇಶಿ ಸಂಸತ್ತುಗಳಲ್ಲಿ ಇದುವರೆಗೂ 17 ಭಾಷಣಗಳನ್ನು ಮಾಡಿದ್ದಾರೆ. ಜಾಗತಿಕ ಗೌರವಾನ್ವಿತ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರಾಗಿ ಅವರ ಸ್ಥಾನಮಾನವನ್ನು ಗೊತ್ತುಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ X ನಲ್ಲಿ ಪೋಸ್ಟ್ ನಲ್ಲಿ ಹೇಳಿದೆ.

ನಮೀಬಿಯಾ ಸಂಸತ್​ ನಲ್ಲಿ ಮೋದಿ ಹೇಳಿದ್ದೇನು?: ನಮೀಬಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಆಫ್ರಿಕಾ ನಡುವಿನ ಸಂಬಂಧಗಳು ಗೌರವ, ಸಮಾನತೆ ಮತ್ತು ಪರಸ್ಪರ ಪ್ರಯೋಜನಗಳನ್ನು ಆಧರಿಸಿ ರೂಪಿತಗೊಂಡಿದ್ದಾಗಿವೆ ಎಂದು ಬಣ್ಣಿಸಿದ್ದಾರೆ. ಭಾರತವು ಆಫ್ರಿಕಾದೊಂದಿಗೆ ಸಹಕರಿಸಲು ಪ್ರಯತ್ನಿಸುತ್ತದೆಯೇ ವಿನಃ ಸ್ಪರ್ಧಿಸಲು ಅಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.ಮೌಲ್ಯ ಸೃಷ್ಟಿ ಮತ್ತು ಸುಸ್ಥಿರ ಬೆಳವಣಿಗೆಯಲ್ಲಿ ಆಫ್ರಿಕಾ ಮುನ್ನಡೆಯಬೇಕು . ಅದಕ್ಕಾಗಿಯೇ ನಾವು ಕೈಗಾರಿಕೀಕರಣಕ್ಕಾಗಿ ಆಫ್ರಿಕಾದ 2063 ರ ಕಾರ್ಯಸೂಚಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ರಕ್ಷಣೆ ಮತ್ತು ಭದ್ರತೆಯಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸಲು ನಾವು ಸಿದ್ಧರಿದ್ದೇವೆ. ವಿಶ್ವ ವ್ಯವಹಾರಗಳಲ್ಲಿ ಆಫ್ರಿಕಾದ ಪಾತ್ರವನ್ನು ಭಾರತ ಗೌರವಿಸುತ್ತದೆ. ನಮ್ಮ G20 ಅಧ್ಯಕ್ಷತೆಯಲ್ಲಿ ನಾವು ಆಫ್ರಿಕಾದ ಧ್ವನಿಯನ್ನು ಬೆಂಬಲಿಸಿದ್ದೇವೆ. ಮತ್ತು ನಾವು “ಜಿ20ಯ ಖಾಯಂ ಸದಸ್ಯ ರಾಷ್ಟ್ರವಾಗಿ ಆಫ್ರಿಕನ್ ಒಕ್ಕೂಟವನ್ನು ಹೆಮ್ಮೆಯಿಂದ ಸ್ವಾಗತಿಸುತ್ತೇನೆ ಎಂದು ಮೋದಿ ಅವರು ಹೇಳಿದರು. COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತವು ಲಸಿಕೆಗಳು ಮತ್ತು ಔಷಧಿಗಳನ್ನು ಒದಗಿಸುವ ಮೂಲಕ ಆಫ್ರಿಕಾವನ್ನು ಹೇಗೆ ಬೆಂಬಲಿಸಿತು ಎಂಬುದನ್ನು ಪ್ರಧಾನಿ ಮೋದಿ ಇದೇ ವೇಳೆ ನೆನಪಿಸಿಕೊಂಡರು.

[t4b-ticker]
error: Content is protected !!