ಇತಿಹಾಸದಲ್ಲೇ ಮೊದಲ ಸಲ ನಿನ್ನೆ ಭೂಮಿಯ ಅತಿ ಚಿಕ್ಕ ದಿನ

Picture of Savistara

Savistara

Bureau Report

ನವದೆಹಲಿ: ಭೂಮಿಯು ಸಾಮಾನ್ಯಕ್ಕಿಂತ ಅತಿ ವೇಗವಾಗಿ ತಿರುಗುತ್ತಿರುವ ಕಾರಣ ಇತಿಹಾಸದಲ್ಲೇ ಮೊದಲ ಬಾರಿಗೆ ನಿನ್ನೆ ಭೂಮಿ ಅತಿ ಚಿಕ್ಕ ದಿನವನ್ನು ದಾಖಲಿಸಿದೆ. ಇದೇ ಜು.22 ಮತ್ತು ಆ.5ರಂದೂ ಇದೇ ರೀತಿ ಅತಿ ಚಿಕ್ಕ ದಿನ ದಾಖಲಾಗಲಿದೆ.ಜು.9, ಜು.22 ಮತ್ತು ಆ.5ರಂದು, ಚಂದ್ರನ ಸ್ಥಾನವು ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದಿನದ ಅವಧಿಯು ಸಾಮಾನ್ಯಕ್ಕಿಂತ 1.3ರಿಂದ 1.51 ಮಿಲಿಸೆಕೆಂಡ್‌ಗಳವರೆಗೆ ಕಡಿಮೆ ಇರುತ್ತದೆ ಎಂದು ಲೈವ್ ಸೈನ್ಸ್‌ ವಿಜ್ಞಾನ ವೇದಿಕೆ ವರದಿ ತಿಳಿಸಿದೆ.ವಿಜ್ಞಾನಿಗಳ ಪ್ರಕಾರ, ಈ ವಿದ್ಯಮಾನಕ್ಕೆ ಚಂದ್ರನ ಸ್ಥಾನ ಕಾರಣ. ಸಾಮಾನ್ಯವಾಗಿ, ಭೂಮಿಯು ಒಂದು ಬಾರಿ ತನ್ನ ಅಕ್ಷದ ಮೇಲೆ ಮೇಲೆ ಸಂಪೂರ್ಣವಾಗಿ ಸಂಪೂರ್ಣವಾಗಿ ತಿರುಗಲು ಬೇಕಾದ ಸಮಯ 24 ಗಂಟೆಗಳು. ಈ ವಿಶೇಷ ದಿನಗಳಂದು ಚಂದ್ರನ ಸ್ಥಾನವು ಸಮಭಾಜಕ ವೃತ್ತದಿಂದ ದೂರ ಸರಿದು ಭೂಮಿಯ ಧ್ರುವಗಳಿಗೆ ಹತ್ತಿರವಾಗುತ್ತದೆ. ಇದು ಭೂಮಿಯ ತಿರುಗುವಿಕೆ ಸಮಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಅತಿ ಚಿಕ್ಕ ದಿನ ದಾಖಲಾಗುತ್ತದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!