ಹೈಕಮಾಂಡ್ ಬೀದಿ ದಾಸಯ್ಯನ ಸಿಎಂ ಮಾಡಿದ್ರೂ ಓಕೆ: ಜಮೀರ್| ಡಿಕೆಶಿ ಸಿಎಂ ಎಂದು ಘೋಷಿಸಿದರೂ ಒಪ್ಪಿಗೆ: ಸಚಿವ

Picture of Savistara

Savistara

Bureau Report

ರಾಜ್ಯದಲ್ಲಿ 2028ರವರೆಗೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಬದ ಲಾವಣೆ ಹೈಕಮಾಂಡ್‌ನಿಂದ ಮಾತ್ರ ಸಾಧ್ಯ. ಒಂದು ವೇಳೆ ಹೈಕಮಾಂಡ್ ನಿರ್ಧರಿಸಿ, ಬೀದಿಯಲ್ಲಿ ಹೋಗುವ ಬೀದಿ ದಾಸಯ್ಯನನ್ನು ಕುರ್ಚಿ ಮೇಲೆ ಕೂಡಿಸಿದರೂ ನಾವು ಒಪ್ಪುತ್ತೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ದಲ್ಲಿ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಡಿ.ಕೆ.ಶಿವಕುಮಾರ್ ಅವ ರನ್ನು ಸಿಎಂ ಮಾಡಿದರೂ ಸ್ವಾಗತ . ಯಾವ ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ, ನವೆಂಬರ್ ಕ್ರಾಂತಿ ಎಂದು ಹೇಳಿದರು. ನವೆಂಬರ್ ಕಳೆದು ಡಿಸೆಂಬರ್ ಬಂತು, ಸಂಕ್ರಾಂತಿ ಕಳೆಯಿತು. ಯುಗಾದಿಯೂ ಬರುತ್ತಿದೆ. ಏನೂ ಆಗಲಿಲ್ಲ ಎಂದು ಅವರು ವಿರೋಧ ಪಕ್ಷದವರಿಗೆ ಕುಟುಕಿದರು.ಮುಂದುವರಿಸಿದಂತೆ, ನಮ್ಮದು ಹೈಕಮಾಂಡ್ ಪಕ್ಷ. ಎಲ್ಲವೂ ಹೈಕಮಾಂಡ್‌ನಲ್ಲಿಯೇ ತೀರ್ಮಾನ ಆಗುತ್ತದೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಒಂದು ವೇಳೆ ಹೈಕಮಾಂಡ್ ಯಾರನ್ನು ಮಾಡಿದರೂ ಒಪ್ಪುತ್ತೇವೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಿ ನೇಮಕ ಮಾಡಿದರೂ ನಮ್ಮದೇನು ತಕರಾರು ಇಲ್ಲ. ನಾವು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ಹೇಳಿದರು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!