ಜನವರಿ 25 ಜಾಲ್ಸೂರು ಹಿಂದೂ ಸಂಗಮ ಕಾರ್ಯಕ್ರಮ| ಭರದ ಸಿದ್ಧತೆ, ಕೇಸರಿಮಯಗೊಂಡ ಜಾಲ್ಸೂರು

Picture of Savistara

Savistara

Bureau Report

ಸುಳ್ಯ: ಅರೆಸೆಸ್ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಪಂಚ ಪರಿವರ್ತನೆ ಉದ್ದೇಶವನ್ನಿಟ್ಟುಕೊಂಡು ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾಲ್ಸೂರು ಮಂಡಲ ವ್ಯಾಪ್ತಿಯ ಕನಕಮಜಲು, ಮಂಡೆಕೋಲು ಗ್ರಾಮ ಒಳಪಟ್ಟ ಹಿಂದೂ ಸಂಗಮ ಜನವರಿ 25 ಜಾಲ್ಸೂರು ಜೆಕೆ ಮೈದಾನದಲ್ಲಿ ಸಂಜೆ 4.30 ಸಭಾ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುಂಚಿತವಾಗಿ 3.30 ಕ್ಕೆ ಸರಿಯಾಗಿ ಅಡ್ಕಾರು ಅಯ್ಯಪ್ಪ ಮಂದಿರ ಬಳಿಯಿಂದ ಶೋಭಯಾತ್ರೆ ಕಾರ್ಯಕ್ರಮ ಮೈದಾನದವರೆಗೆ ಸಾಗಿ ಬರಲಿದೆ.

ಹಿಂದೂ ಸಂಗಮ ಕಾರ್ಯಕ್ರಮ ಯಶಸ್ವಿ ದೃಷ್ಟಿಯಿಂದ ನೂರಾರು ಸ್ವಯಂಸೇವಕರು ಹಗಲು ರಾತ್ರಿ ಪರಿಶ್ರಮಪಡುತ್ತಿದ್ದೂ ಜಾಲ್ಸೂರು ಮುಖ್ಯ ಪೇಟೆ ಕೇಸರಿಮಗೊಂಡಿದ್ದು ಮೈದಾನ ಸುತ್ತ ಮುತ್ತ ಬಂಟಿಂಗ್ಸ್ ಮೂಲಕ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಲಾಗಿದೆ.

ಪ್ರತಿ ಮನೆಯ ಹಿಂದೂ ಬಂಧುಗಳು ಸಮಾಜದ ಪರಿವರ್ತನೆಗೆ ಈ ಹಿಂದೂ ಸಂಗಮದಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!