ಮಂಗಳೂರು: ಎಂಸಿಎಫ್ ಕಾರ್ಖಾನೆಯ ಹೆಸರೇ ಮಾಯ – ಐವನ್ ಡಿಸೋಜಾ ಖಡಕ್ ಎಚ್ಚರಿಕೆ

Picture of Savistara

Savistara

Bureau Report

ಕಳೆದ ಅಕ್ಟೋಬರ್‌ನಿಂದ ಎಂಸಿಎಫ್ ಕಾರ್ಖಾನೆಯ ಹೆಸರು ಮಾಯವಾಗಿದೆ. ‘ಎಂಸಿಎಫ್’ ಎಂಬ ಐತಿಹಾಸಿಕ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು. ಕೂಡಲೇ ಆ ಹೆಸರನ್ನು ನಾಮಫಲಕದಲ್ಲಿ ಮರುಸ್ಥಾಪಿಸಬೇಕು. ಇದಕ್ಕೆ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಲಾಗುವುದು. ಅಗತ್ಯವಿದ್ದರೆ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ, ನಾನೇ ಕಾರ್ಖಾನೆಗೆ ತೆರಳಿ ಸಾಧ್ಯವಾದರೆ ನಾಮಫಲಕವನ್ನು ತೆಗೆದುಹಾಕುತ್ತೇನೆ ಇದಕ್ಕೆ ನೀವು ಅವಕಾಶ ಕೊಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿ’ಸೋಜಾ ಎಚ್ಚರಿಸಿದರು.

ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್(Mangalore Chemicals & Fertilisers-ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ) ಎಂಬ ಹೆಸರನ್ನು ನಾಮ ಫಲಕದಲ್ಲಿ ತಕ್ಷಣ ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ‘ಎಂಸಿಎಫ್ ಹೆಸರು ಉಳಿಸಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಂಸಿಎಫ್ ಉಳಿವಿಗಾಗಿ ನಾನು ಹೋರಾಟ ನಡೆಸಿದ್ದೇನೆ.

2015ರಲ್ಲಿ ಬಿರ್ಲಾ ಗುಂಪಿನ ಪಾಲಾದ ನಂತರ, ಕಳೆದ ಅಕ್ಟೋಬರ್‌ನಲ್ಲಿ Adventz ಗುಂಪು ದಾರದೀಪ್ ಥಾಸ್ಟೇಟ್ಸ್ ಜೊತೆ ವಿಲೀನಗೊಳಿಸಿ ಎಂಸಿಎಫ್ ಹೆಸರನ್ನು ಅಳಿಸಲಾಗಿದೆ ಎಂದು ಆಕ್ಷೇಪಿಸಿದರು.

ಈ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಮಾಜಿ ಉದ್ಯೋಗಿಗಳು ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಎಂಸಿಎಫ್ ಹೆಸರನ್ನು ಉಳಿಸುವ ಹೋರಾಟಕ್ಕೆ ಮುಂದಾಗಿದ್ದಾರೆ. ಕೂಡಲೇ ಎಂಸಿಎಫ್ ಹೆಸರನ್ನು ಮರುಸ್ಥಾಪಿಸಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐವಾನ್ ಡಿ’ಸೋಜಾ ಎಚ್ಚರಿಸಿದರು

[t4b-ticker]
error: Content is protected !!