ಉಡುಪಿ ಕೃಷ್ಣಮಠದಲ್ಲಿ ಹೊಸ ವಸ್ತ್ರ ಸಂಹಿತೆ ಜಾರಿ: ಭಕ್ತರಿಗೆ ಕಡ್ಡಾಯ ಡ್ರೆಸ್ ಕೋಡ್

Picture of Savistara

Savistara

Bureau Report

ಉಡುಪಿಯ ಪ್ರಸಿದ್ಧ ಶ್ರೀಕೃಷ್ಣಮಠದಲ್ಲಿ ಭಕ್ತರಿಗಾಗಿ ಹೊಸ ವಸ್ತ್ರ ಸಂಹಿತೆ (Dress Code) ನಿಯಮವನ್ನು ಜಾರಿಗೆ ತರಲಾಗಿದೆ. ತಕ್ಷಣದಿಂದಲೇ ಈ ನಿಯಮ ಅನ್ವಯವಾಗಿದ್ದು, ದೇವಾಲಯ ಪ್ರವೇಶಿಸುವ ಭಕ್ತರು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಹೊಸ ನಿಯಮದಂತೆ, ಪುರುಷ ಭಕ್ತರು ದೇವಾಲಯದೊಳಗೆ ಪ್ರವೇಶಿಸುವ ವೇಳೆ ಅಂಗಿ ಹಾಗೂ ಬನಿಯನ್‌ಗಳನ್ನು ತೆಗೆದು, ಸಂಪ್ರದಾಯಬದ್ಧ ರೀತಿಯಲ್ಲಿ ಪ್ರವೇಶಿಸಬೇಕು. ದೇವಾಲಯದ ಪಾವಿತ್ರ್ಯ, ಶಿಸ್ತು ಮತ್ತು ಧಾರ್ಮಿಕ ಸಂಸ್ಕೃತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಈ ನಿಯಮವು ಭಕ್ತರ ಅನುಕೂಲಕ್ಕೂ ಹಾಗೂ ದೇವಸ್ಥಾನದ ಪವಿತ್ರತೆಯನ್ನು ಉಳಿಸಿಕೊಳ್ಳುವುದಕ್ಕೂ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವ ಭಕ್ತರು ಈ ಹೊಸ ನಿಯಮದ ಬಗ್ಗೆ ಮುಂಚಿತವಾಗಿ ಅರಿವು ಹೊಂದಿ, ಮಠದ ಸಂಪ್ರದಾಯಗಳಿಗೆ ಗೌರವ ನೀಡಿ ಸಹಕರಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

karavaliexpress #udupi #shrikrishna

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!