ನ.ಪಂ. ಕಸ ಸಮರ್ಪಕ ವಿಲೇವಾರಿ ಆಗದಿರಲು ಬಿಜೆಪಿ ಆಡಳಿತದ ನಿರ್ಲಕ್ಷ್ಯವೇ ಕಾರಣ | ನಗರದ ಕಸ ಸಮಸ್ಯೆ ವಿರುದ್ದ ಪಂಚಾಯತ್ ಎದುರು ಕಾಂಗ್ರೆಸ್‌ ಪ್ರತಿಭಟನೆ

Picture of Savistara

Savistara

Bureau Report

ಸುಳ್ಯ ನಗರದ ಕಸ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ, ಸುಳ್ಯನಗರ ಕಾಂಗ್ರೆಸ್ ವತಿಯಿಂದ ಜ.22ರಂದು ಪಂಚಾಯತ್‌ ಎದುರು ಪ್ರತಿಭಟನಾ ಸಭೆ ನಡೆಯಿತು. ಬೆಳಗ್ಗೆ ಪಂಚಾಯತ್ ಎದುರು ಸೇರಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಆಡಳಿತ ನಡೆಸಿದವರ ಹಾಗೂ ಪಂಚಾಯತ್ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ “25-30 ವರ್ಷದಿಂದ ಸುಳ್ಯದ ಘನತ್ಯಾಜ್ಯ ದೊಡ್ಡ ಸಮಸ್ಯೆ. ಇದರ ಸಮರ್ಪಕ ನಿರ್ವಹಣೆಗೆ ಇಷ್ಟು ವರ್ಷ ಆಡಳಿತ ಮಾಡಿದ ಬಿಜೆಪಿಗೆ ಇದು ಆಗಿಲ್ಲ ಎಂದಾದರೆ ದುರಾದೃಷ್ಟ. 5 ಎಕ್ರೆ ಜಾಗ ಗುರುತಿಸಲು ಇವರಿಂದ ಆಗಿಲ್ಲ. ಇದೇ ಆಗಿಲ್ಲವಾದರೆ ಇನ್ನೇನು ಆಡಳಿತ ಇವರು ನೀಡಿರಬಹುದು ಎಂದು ಸುಳ್ಯದ ಜನರು ಅವಲೋಕನ ಮಾಡಬೇಕು. ಕಸವನ್ನು ನಗರ ಪಂಚಾಯತ್ ಎದುರು ಹಾಕಿ ಅದನ್ನು ಸಾಗಾಟಕ್ಕೆ ಲಕ್ಷಗಟ್ಟಲೆ ಹಣ ವ್ಯಯ ಮಾಡಿರುವುದು ಬಿಜೆಪಿ ಆಡಳಿತದ ಸಾಧನೆ. ಇಲ್ಲಿಯ ಸಮಸ್ಯೆಗಳಿಗೆ ಬಿಜೆಪಿ ಆಡಳಿತವೇ ಕಾರಣ. ಅಂಗಾರ ಅವರು ಶಾಸಕರಾಗಿ ಸಚಿವರಾಗಿದ್ದರು. ಅವರ ಮೂಲಕ ಸಮಸ್ಯೆ ಪರಿಹಾರಕ್ಕೆ ಯಾಕೆ ಇಲ್ಲಿಯ ಆಡಳಿತ ಆಸಕ್ತಿ ವಹಿಸಿಲ್ಲ. ಆಶ್ರಯ ಸೈಟ್ ಕೊಡಲು ಇವರಿಂದ ನೀಡಲು ಸಾಧ್ಯ ಆಗಿಲ್ಲ” ಎಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ, ನಗರ ಪಂಚಾಯತ್‌ ಆಡಳಿತ ಹಿಡಿದವರು ನಗರದ ವ್ಯವಸ್ಥೆಯನ್ನು ಸಮಸ್ಥಿತಿಗೆ ತರಬೇಕು. ಆದರೆ ಇಲ್ಲಿ ದೊಡ್ಡದಾಗಿ ಕಸದ ಸಮಸ್ಯೆ ಎದ್ದು ಕಾಣುತ್ತಿದೆ. ಅದನ್ನು ಸರಿಪಡಿಸಲು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಇದು ಇಲ್ಲಿ ಆಡಳಿತ ನಡೆಸಿದ ಬಿಜೆಪಿಯ ವೈಫಲ್ಯ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ನಗರದ ದೊಡ್ಡ ಸಮಸ್ಯೆ. ಅದನ್ನು ಸರಿಪಡಿಸಲು ಬಿಜೆಪಿ ಆಡಳಿತ ವಿಫಲವಾಗಿ ಹೊರ ನಡೆದಿದೆ. ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು. ಇಂದು ನಾವು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಸಮಸ್ಯೆ ಸರಿಪಡಿಸದೇ ಇದ್ದರೆ ಬೃಹತ್‌ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಮಾತನಾಡಿ “1998ರಿಂದ ಸುಳ್ಯದ ಕಸ ಸಮಸ್ಯೆಯನ್ನು ನೋಡುತಿದ್ದೇವೆ. ಆದರೆ ಅಂದಿನಿಂದ ಇಂದಿನ ವರೆಗೆ ಸೂಕ್ತ ವ್ಯವಸ್ಥೆ ಮಾಡಲು ಇವರಿಂದ ಆಗಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ಈ ಸಮಸ್ಯೆ ಬಂದಿದ್ದರು ಅವರು ಕೂಡಾ ಸುಳ್ಯಕ್ಕೆ ಬಂದು ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಜಿಲ್ಲೆಯ ಸಂಸದರು, ಸುಳ್ಯದ ಶಾಸಕರು ನಗರ ಪಂಚಾಯತ್ ಅಧ್ಯಕ್ಷರ ಆಯ್ಕೆಗೆ ಪಂಚಾಯತ್ ಗೆ ಬರುತ್ತಾರೆ ಹೊರತು ಇಲ್ಲಿಯ ಕಸ ಸಮಸ್ಯೆಯ ನಿರ್ವಹಣೆಯ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಯಾಕೆ” ಎಂದು ಪ್ರಶ್ನಿಸಿದರು.ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಮಾತನಾಡಿ, “ನಾವು ಇಲ್ಲಿ ಪ್ರತಿಭಟನೆ ನಡೆಸಲು ಕಾರಣ ಇಲ್ಲಿ ಆಡಳಿತ ನಡೆಸಿ ಹೋಗಿರುವ ಬಿಜೆಪಿ ಆಡಳಿತ. ಅಷ್ಟು ಸಮಸ್ಯೆ ಮಾಡಿ ಇಟ್ಟು ಹೋಗಿದ್ದಾರೆ. ಆಡಳಿತಕ್ಕೆ ಸಮಸ್ಯೆ ಪರಿಹರಿಸಲು ಯಾಕೆ ಸಾಧ್ಯವಾಗಿಲ್ಲ” ಎಂದು ಪ್ರಶ್ನಿಸಿದರು.

ನ.ಪಂ. ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ಮಾತನಾಡಿ ಆಡಳಿತ ಕೆಲಸ ಮಾಡದೇ ಇರುವಾಗ ವಿರೋಧ ಪಕ್ಷವಾಗಿ ನಾವು ಪ್ರಶ್ನೆ ಮಾಡಿದ್ದೇವೆ. ಪ್ರತಿಫಲ ಶೂನ್ಯವಾಗಿದೆ. ಕಾರಣ ನಮ್ಮಲ್ಲಿ ಹೆಚ್ಚಿನ ಸದಸ್ಯ ಬಲ ಇರಲಿಲ್ಲ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್‌ ಆಡಳಿತಕ್ಕೆ ಬಂದರೆ ಸುಂದರ ಸುಳ್ಯವನ್ನು ನೋಡಬಹುದಾಗಿದೆ ಎಂದು ಹೇಳಿದರು.ಅಂಗಾರರು ಮಂತ್ರಿಯಾದರೂ ಸುಳ್ಯದ ಕಸದ ಸಮಸ್ಯೆ ನಿವಾರಣೆ ಇವರಿಂದ ಆಗಿಲ್ಲ. ಸುಳ್ಯ ನಗರ ಪಂಚಾಯತ್‌ ಎದುರಿನ ಶೆಡ್‌ನಲ್ಲಿ ನಲ್ಲಿ ಕಸ ತುಂಬಿದರೆ ಬಿಜೆಪಿ ಗೆ ಲಾಭ ಯಾಕೆಂದರೆ ಚುನಾವಣೆ ನಡೆದು ಬಳಿಕ ಬಂದವರು ಅದನ್ನು ಖಾಲಿ ಮಾಡಬಹುದಲ್ಲವೇ. ಏನು ಲಾಭ ಎನ್ನುವುದನ್ನು ವಿನಯರಲ್ಲಿ ಕೇಳಿ. ಎಷ್ಟು ಪರ್ಸೆಂಟ್ ಎಂದು ಗೊತ್ತಾಗುತ್ತದೆ ಎಂದು ವೆಂಕಪ್ಪ ಗೌಡರು ಸುಧೀರ್ಘವಾಗಿ ಮಾತನಾಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾತನಾಡಿ, “ನಗರದ ಕಸದ ಕುರಿತು ಮಾತನಾಡಿದರೆ ನನಗೆ ಬೆದರಿಕೆ ಬರುತ್ತದೆ. ನಾನು ಇಲ್ಲಿಯ ಪ್ರಜೆಯಾಗಿ ಮಾತನಾಡಿದ್ದೇನೆ. ಸಮಸ್ಯೆ ಸರಿಯಾಗದಿದ್ದರೆ ಮುಂದೆಯೂ ಮಾತನಾಡುತ್ತೇನೆ. ಕಸ ಸಾಗಾಟದಲ್ಲಿ ಕಮಿಷನ್ ಪಡೆದಿರುವುದಕ್ಕೆ ನಮ್ಮಲ್ಲಿ ದಾಖಲೆ ಇದೆ” ಎಂದವರು ಹೇಳಿದರು.

ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ ದಾಸ್ ಮಾತನಾಡಿ “ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸಲು ಮನವಿ ಸಲ್ಲಿಸಿದರೂ ಇನ್ನೂ ಆಗಿಲ್ಲ. ಇದರ ಹಿಂದೆ ಶಕ್ತಿ ಕೆಲಸ ಮಾಡುತ್ತಿದೆ. ಇಲ್ಲಿ ಕಸ ಇದ್ದರೆ ಅವರಿಗೆ ಲಾಭ ಇದೆ” ಎಂದು ಹೇಳಿದರು.

ಕೆಡಿಪಿ ಸದಸ್ಯೆ ಸುಜಯ ಕೃಷ್ಣ ರವರು ಮಾತನಾಡಿ ಕಸ ತೆರವಿಗೆ ಆಗ್ರಹಿಸಿದರು.ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ರವರು ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಶೀಘ್ರವೇ ಕಸದ ಸಮಸ್ಯೆಗೆ ಪರಿಹಾರ ಮಾಡುವಂತೆ ಪ್ರತಿಭಟನಾಗಾರರು ಒತ್ತಾಯಿಸಿದರು.ಇಂಟೆಕ್ ಕಾಂಗ್ರೆಸ್ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಉಮ್ಮರ್ ಕುರುಂಜಿಗುಡ್ಡೆ, ನಂದರಾಜ ಸಂಕೇಶ, ಷರೀಫ್ ಕಂಠಿ, ದಿನೇಶ್ ಸರಸ್ವತಿ ಮಹಲ್, ಶಶಿಧರ ಕೇರ್ಪಳ, ರಾಧಾಕೃಷ್ಣ ಪರಿವಾರಕಾನ, ಸುರೇಶ ಕಂದಡ್ಕ, ಕೃಷ್ಣ ಸ್ವಾಮಿ ಕಂದಡ್ಕ, ರಕ್ಷಿತ್ ಗೂನಡ್ಕ, ಡೇವಿಡ್ ಧೀರಾ ಕ್ರಾಸ್ತ ಸುಜಯ ಕೃಷ್ಣ ಬೀರಮಂಗಲ, ಪ್ರೇಮಾ ಟೀಚರ್, ಮಹೇಶ್ ಬೆಳ್ಳಾರ್ಕರ್, ಪಿ.ಎ.ಮಹಮ್ಮದ್, ಬಾಲಕೃಷ್ಣ ಭಟ್, ಜತ್ತಪ್ಪ ರೈ, ಧನುಷ್ ಕುಕ್ಕೆಟ್ಟಿ, ರಾಜು ಪಂಡಿತ್, ಶಹೀದ್ ಪಾರೆ, ಚಂದ್ರ ಕೂಟೇಲು, ಶರವಣ, ಭವಾನಿಶಂಕರ ಕಲ್ಮಡ್ಕ, ಮಂಜುನಾಥ ಮಡ್ತಿಲ, ರಂಜಿತ್ ರೈ ಮೇನಾಳ, ಭೋಜಪ್ಪ ನಾಯ್ಕ, ಪರಮೇಶ್ವರ ಕೆಂಬಾರೆ ಮೊದಲಾದವರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಶಶಿಧರ ಎಂ.ಜೆ. ಕಾರ್ಯಕ್ರಮ ನಿರ್ವಹಿಸಿದರು. ಭವಾನಿಶಂಕರ ಕಲ್ಮಡ್ಕ ವಂದಿಸಿದರು.

[t4b-ticker]
error: Content is protected !!