ಸುಳ್ಯದಲ್ಲಿ ಹಿಂದೂ ಸಂಗಮ

Picture of Savistara

Savistara

Bureau Report

ಸಮಾಜದ ಸದ್ಗುಣಗಳನ್ನು ಅನುಸರಿಸುವುದೇ ಧರ್ಮ: ಗಣಪತಿ ಹೆಗ್ಡೆ

ಜೀವದ ಸಕಲ ಜೀವಜಂತುಗಳಲ್ಲಿ ನಾವು ದೇವರನ್ನೂ ಪೂಜಿಸುತ್ತೇವೆ. ಆ ಆಯ್ಕೆಯ ಸ್ವಾತಂತ್ರ್ಯ ನಮಗಿದೆ. ಒಳ್ಳೆಯದನ್ನು ಅನುಸರಣೆ ಮಾಡುವುದೇ ಧರ್ಮ. ನಮ್ಮ ಸಮಾಜದ ತಪ್ಪುಗಳನ್ನು ನಾವೇ ಸರಿಪಡಿಸಬೇಕು.

ದೇವಸ್ಥಾನ, ನೀರು, ಸ್ಮಶಾನ ಈ ಮೂರರಲ್ಲಿ ಜಾತಿವಿರಬಾರದೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರತಿನಿಧಿ ಗಣಪತಿ ಹೆಗಡೆ ಹೇಳಿದರು.


ಅವರು ಜ.25 ರಂದು ಸುಳ್ಯದ ಪ್ರಭು ಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ತಾಲೂಕಿನ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಎಂ.ಬಿ.ಸದಾಶಿವರು ” ನಾವು ಮಾದರಿ ಹಿಂದುಗಳಾಗಬೇಕು. ನನ್ನ ಧರ್ಮ ನನ್ನ ಹೆಮ್ಮೆ. ಪರಧರ್ಮ ಸಹಿಷ್ಣುತೆ ನನ್ನ ಹಿರಿಯರು ನನಗೆ ಕಲಿಸಿದ ಸಂಸ್ಕಾರ ” ಎಂದರು.

ಗೌರವ ಸಲಹೆಗಾರರಾದ ಡಾ.ಯಶೋದಾ ರಾಮಚಂದ್ರರು ” ನಮ್ಮ ಸಂಸ್ಕೃತಿಯ ಬೇರುಗಳು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿವೆ. ಆದ್ದರಿಂದ ಅವುಗಳ ನಾಶ ಎಂದಿಗೂ ಸಾಧ್ಯವಿಲ್ಲ” ಎಂದರು.
ಹಿರಿಯ ಸಾಹಿತಿ ಶ್ರೀಮತಿ ಜಯಮ್ಮ ಚೆಟ್ಟಿಮಾಡ ಭಾರತಮಾತೆಯ ಭಾವಚಿತ್ರದ ಮುಂದೆ ದೀಪಬೆಳಗಿದರು. ಪುರೋಹಿತ ನಾಗರಾಜ ಭಟ್ ಶಂಖನಾದಗೈದರು. ವಿಷ್ಣು ನಾಗ್ ಶೇಟ್ ವೈಯಕ್ತಿಕ ಗೀತೆ ಹಾಡಿದರು. ಜನಪದ ವಿದ್ವಾಂಸ ಕೇಪು ಅಜಿಲ ಮುಖ್ಯ ಅತಿಥಿಯಾಗಿದ್ದರು. ಗೌರವ ಸಲಹೆಗಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಮತ್ತು ಸಂಚಾಲಕ ಚಂದ್ರಶೇಖರ ನಲ್ಲೂರಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಹಿಂದೂ ಸಂಗಮದ ಸಂಯೋಜಕ ಎ.ಟಿ.ಕುಸುಮಾಧರ ಸ್ವಾಗತಿಸಿ, ಸುನಿಲ್ ಕೇರ್ಪಳ ವಂದಿಸಿದರು.
ಉದಯಭಾಸ್ಕರ್ ಸುಳ್ಯ ಹಾಗೂ ಶ್ರೀಮತಿ ಗಾಯತ್ರಿ ಚಿದಾನಂದ್ ಕಾರ್ಯಕ್ರಮ ನಿರೂಪಿಸಿದರು.

ಉಪವಸತಿಯವರ ಸಂಕಲ್ಪ
ಕಾಯರ್ತೋಡಿ ಉಪವಸತಿಯವರು ತಮ್ಮ ಉಪವಸತಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಬಗ್ಗೆ ಸಂಕಲ್ಪ ಸ್ವೀಕರಿಸಿದರೆ, ಶಾಂತಿನಗರ ಬೆಟ್ಟಂಪಾಡಿ ಉಪವಸತಿಯವರು ಮತ್ತು ಬೀರಮಂಗಲ ಉಪವಸತಿಯವರು ಕುಟುಂಬ ಪ್ರಬೋಧನ ವಿಚಾರದಡಿ ಪ್ರತೀವಾರ ಭಜನೆ ಆಯೋಜಿಸುವ ಸಂಕಲ್ಪ ಮಾಡಿದರು. ಬೂಡು ಕೇರ್ಪಳ ಉಪವಸತಿಯವರು ನಾಗರಿಕ ಸಾಮರಸ್ಯದ ಚಿಂತನೆಯಡಿ ತಿಂಗಳಿಗೊಂದು ಬಾರಿ ಎಲ್ಲ ಮನೆಯವರೂ ಸೇರಿ ಸಹಭೋಜನ ಮಾಡುವ ಸಂಕಲ್ಪಗೈದರು. ಹಳೆಗೇಟು ಉಪವಸತಿಯವರು ತಮ್ಮ ಉಪವಸತಿಯ ಪ್ರತೀಮನೆ ಹಾಗೂ ಪರಿಸರವನ್ನು ಅತ್ಯಂತ ಸ್ವಚ್ಛವಾಗಿರಿಸಿಕೊಳ್ಳುವ ಸಂಕಲ್ಪ ಮಾಡಿದರು.

[t4b-ticker]
error: Content is protected !!