
ಸುಳ್ಯ : ಹಿಂದುತ್ವ ಈ ದೇಶದ ಅಸ್ಮಿತೆ, ಭಾರತ ಮತ್ತು ಹಿಂದುತ್ವ ಬೇರೆ ಬೇರೆಯಲ್ಲ ಅವೆಲ್ಲವೂ ಒಂದೇಯಾಗಿದೆ ಯೆಂದು ಎಬಿವಿಪಿ ರವಿ ಮಂಡ್ಯ ಹೇಳಿದ್ದಾರೆ.

ಮಂಡಲ ದ ಹಿಂದೂ ಸಂಗಮ ಕಾರ್ಯಕ್ರಮ ದಲ್ಲಿ ಮಾತನಾಡುತ್ತ ಭಾರತ ಯಾವತ್ತೂ ಯಾರ ಮೇಲೂ ಆಕ್ರಮಣ ಮಾಡಿಲ್ಲ,ದಂಡೆತ್ತಿ ಹೋಗಲಿಲ್ಲ ಎಲ್ಲರನ್ನೂ ಗೌರವದಿಂದ ಉದಾತ್ತ ಸಂಸ್ಕೃತಿ ನಮ್ಮದು ಆದರೆ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಕೌಟುಂಬಿಕ ಪದ್ಧತಿ ಬಿರುಕುಗಳಾಗುತ್ತಿದೆ ಚಿಕ್ಕದಾಗುತ್ತ ವೈಮನಸ್ಸುಗಳು, ಅಂತಃಕಲಹ ಜಾಸ್ತಿಯಾಗಿತ್ತಿದ್ದು ಈ ಬಗ್ಗೆ ಗಂಭೀರವಾಗಿ ಚಿಂತನೆಯ ಅಗತ್ಯವಿದೆ.

ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಬಹುಮುಖ್ಯ ಭಾರತ ವಿಭಿನ್ನ ಪ್ರಕಾರ ಸಂಸ್ಕೃತಿ ಒಳಗೊಂಡಿದೆ ನಾವೆಲ್ಲ ಒಂದೇ ಭಾವ ನಮ್ಮಲ್ಲಿ ಮೂಡಬೇಕಾದ ಅವಶ್ಯಕತೆ ಯಿದ್ದು ಈ ನಿಟ್ಟಿನಲ್ಲಿ ಅರೆಸೆಸ್ ಕಳೆದ ನೂರು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ ಹಿಂದೂ ಸಂಗಮ ಮುಖ್ಯ ಉದ್ದೇಶ ಸಮಾಜದಲ್ಲಿ ಪಂಚ ಪರಿವರ್ತನೆ ನಾವೆಲ್ಲರೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ರವಿ ಮಂಡ್ಯ ತಿಳಿಸಿದರು. ಹಿಂದೂ ಸಂಗಮ ತಾಲೂಕು ಅಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ ನಾನು ಒಬ್ಬ ಹಿಂದೂವಾಗಿ ನನ್ನ ಧರ್ಮದ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಹೆಮ್ಮೆಯಿದೆ, ಯಾವ ರಾಜಕೀಯ ಅಕಾoಕ್ಷೆ ನನಗಿಲ್ಲ ಸಾಮಾಜಿಕ ಪರಿವರ್ತನೆ ಯ ಈ ಕಾರ್ಯದಲ್ಲಿ ಸಮಾಜದ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು













































