ಹತ್ಯೆ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಬಂಧನ

Picture of Savistara

Savistara

Bureau Report

ಕಾರವಾರ: ಗುರೂಜಿ ಜೊತೆಗಿನ ಸಂಬಂಧದ ವಿಚಾರದಲ್ಲಿ ಗಲಾಟೆನಡೆದು ಓರ್ವನ ಹತ್ಯೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಗುರೂಜಿ ಜೊತೆಗಿನ ಸಂಬಂಧದ ವಿಚಾರವಾಗಿ ದೂರು ನೀಡಿದ್ದು ಗಲಾಟೆಗೆ ಕಾರಣವಾಗಿದ್ದು, ಬಳಿಕ ನಡೆದ ಗಲಾಟೆಯಲ್ಲಿ ಓರ್ವನಿಗೆ ಚೂರಿ ಇರಿದು ಹತ್ಯೆ ಮಾಡಲಾಗಿದೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.41 ವರ್ಷದ ವಸಂತ ನಾಯ್ಕ ಮೃತ ವ್ಯಕ್ತಿ. ಮಹೇಶ್ ಮತ್ತು ಕುಮಾರ್ ಎಂಬ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಶಿವಮೊಗ್ಗದ ಕಮಲಾಕರ್ ಭಟ್ ಗುರೂಜಿ ಎಂಬ ಜ್ಯೋತಿಷಿ ಜೊತೆಗೆ ಸುಚಿತ್ರಾ ಎಂಬ ವಿವಾಹಿತ ಮಹಿಳೆ ವಾಸವಿದ್ದರು. ಗುರೂಜಿ ಜೊತೆಗಿನ ತನ್ನ ತಾಯಿಯ ಅಕ್ರಮ ಸಂಬಂಧದ ವಿಚಾರ ಸುಚಿತ್ರಾ ಪುತ್ರಿಗೆ ಗೊತ್ತಾಗಿತ್ತು. ಆಕೆ ಈ ವಿಚಾರವನ್ನು ತಂದೆ ಮಹೇಶ ನಾಯ್ಕಗೆ ತಿಳಿಸಿದ್ದಳು. ಅಲ್ಲದೆ ತಾಯಿಗೆ ತಿಳಿಸಿದೆ ಸಿದ್ದಾಪುರದ ಚಿಕ್ಕಪ್ಪ ವಸಂತ್ ಮನೆಗೆ ಬಂದಿದ್ದಳು.

ಮಗಳನ್ನು ಹುಡುಕೊಂಡು ಬಂದ ಸುಚಿತ್ರಾ ಯುವಕರೊಂದಿಗೆ ಆಗಮಿಸಿದ್ದು, ಮನೆಯಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಗಲಾಟೆ ನಡೆದು ಸುಚಿತ್ರಾ ಜೊತೆಗೆ ಆಗಮಿಸಿದ್ದ ಯುವಕರು ವಸಂತ್, ಮಹೇಶ್ ಮತ್ತು ಪಕ್ಕದ ಮನೆಯ ಕುಮಾರ್ ಗೆ ಚಾಕು ಇರಿದಿದ್ದಾರೆ.ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ವಸಂತ್ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರು ಆರೋಪಿಗಳಾದ ಸುಚಿತ್ರಾ, ಕಮಲಾಕರ ಭಟ್ ಗುರೂಜಿ ಸೇರಿ ಏಳು ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!