ತಿರುವನಂತಪುರಂ: ಮಕ್ಕಳದಲ್ಲಿ ಹೆಚ್ಚುತ್ತಿರುವಸಾಮಾಜಿಕ ಜಾಲತಾಣಗಳ ವ್ಯಸನದ ಸಮಸ್ಯೆ ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೇರಳದ ಶಿಕ್ಷಣ ಇಲಾಖೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಮಕ್ಕಳು ತುತ್ತಾಗುತ್ತಿದ್ದು, ಇದು ಗಂಭೀರ ವಿಷಯವಾಗಿದೆ. ಈ ಬಗ್ಗೆ ತುರ್ತು ಚರ್ಚೆಯ ಅಗತ್ಯವಿದೆ. ಇಂಟರ್‌ನೆಟ್ ಸಾಕ್ಷರತೆ ಮತ್ತು ಮೊಬೈಲ್ ಫೋನ್ ಬಳಕೆಯಲ್ಲಿ ದೇಶದಲ್ಲಿಯೇ ಮುಂದಿರುವ ಕೇರಳದಂಥ ರಾಜ್ಯದಲ್ಲಿ ಈ ವಿಷಯ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಒಂದು ಕಾಲದಲ್ಲಿ ಹೊರಾಂಗಣ ಆಟಗಳು ಮತ್ತು ಸಾಮಾಜಿಕ ಸಂವಹನಗಳಿಂದ ತುಂಬಿದ್ದ ಮಕ್ಕಳ ದಿನಚರಿ ಈಗ ಕೇವಲ ಮೊಬೈಲ್ ಫೋನ್ ಪರದೆಗಳಿಗೆ ಸೀಮಿತವಾಗಿದೆ. ದೀರ್ಘಕಾಲದವರೆಗೆ ಮೊಬೈಲ್‌ನಲ್ಲಿ ಕಾಲ ಕಳೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಇದು ಸಾಮಾಜಿಕವಾಗಿ ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಯಂತ್ರಿಸಲು ಕಠಿಣ ಕಾನೂನಿನ ಅಗತ್ಯವಿದೆಯೇ ಅಥವಾ ಪೋಷಕರು, ಮಕ್ಕಳ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಡಬೇಕೇ ಎಂಬ ಕುರಿತು ಸರ್ಕಾರ ಸಾರ್ವಜನಿಕರಿಂದ ಅಭಿಪ್ರಾಯ ಕೋರಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ.
ಮಕ್ಕಳ ಜಾಲತಾಣ ವ್ಯಸನ ನಿಯಂತ್ರಣಕ್ಕೆ ಕ್ರಮ
Savistara
Bureau Report
[t4b-ticker]









































