ಕೇರಳ ವಿಧಾನಸಭಾ ಚುನಾವಣೆ ಕ್ಷಣಗಣನೆ | ಮಂಜೇಶ್ವರದಲ್ಲಿ ಮತ್ತೇ ಸ್ಪರ್ಧಿಸಲು ಬಿಜೆಪಿ ಮುಖಂಡ ಕೆ ಸುರೇಂದ್ರನ್ ಆಸಕ್ತಿ?!

Picture of Savistara

Savistara

Bureau Report

ಕಾಸರಗೋಡು: ಕೇರಳ ವಿಧಾನಸಭಾ ಅವಧಿ ಕೆಲವೇ ತಿಂಗಳಲ್ಲಿ ಮುಗಿಯಲಿದ್ದು ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿದೆ.ಬಿಜೆಪಿ ಈ ಚುನಾವಣೆಯಲ್ಲಿ ಚಾಲೆಂಜ್ ಗಿ ಸ್ವೀಕಾರ ಮಾಡಿದೆ ಗೆಲ್ಲುವ ಅವಕಾಶ ವಿರುವ ಕ್ಷೇತ್ರವಾಗಿರುವ ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಕೇರಳ ಘಟಕ ಮಾಜಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ 2016 ರಲ್ಲಿ 89 ಮತ್ತು 2021 ರಲ್ಲಿ 845 ಕೆಲವೇ ಮತಗಳಿಂದ ಸೋತಿದ್ದರು ಇದೀಗ ಮತ್ತೇ ಈ ಕ್ಷೇತ್ರದತ್ತ ಕಣ್ಣಿಟ್ಟಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಒಂದು ವಾರದಿಂದ ಪಕ್ಷ ಸಂಘಟನೆ ಮತ್ತು ಖಾಸಗಿ ಕಾರ್ಯಕ್ರಮ ಭಾಗಿಯಾಗುತ್ತಿದ್ದಾರೆ ಅದಲ್ಲದೆ ಕುಂಬಳೆ ಬಳಿ ಅರಿಕ್ಕಾಡಿ ಟೋಲ್ ರದ್ದು ವಿಚಾರದಲ್ಲಿ ಕೇಂದ್ರ ಸರ್ಕಾರ ಗಮನ ಸೆಳೆದು ಇದೀಗ ಟೋಲ್ ಸಂಗ್ರಹ ರದ್ದುಗೊಂಡಿದೆ.ಕಳೆದ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾ ಬಿಜೆಪಿ ಯಲ್ಲಿನ ಆಂತರಿಕ ಅಸಮಾಧಾನ ಈ ಹಿನ್ನಲೆ ಯಲ್ಲಿ ಸರ್ವ ಸಮ್ಮತ ಅಭ್ಯರ್ಥಿ ಯಾಗಿ ಸುರೇಂದ್ರನ್ ಗೆ ಪಕ್ಷ ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ, ಕನ್ನಡ, ಮಲೆಯಾಲಂ, ತುಳು ಭಾಷೆಯಲ್ಲಿ ಹಿಡಿತ ಹೊಂದಿರುವುದು ಇವರಿಗೆ ಪ್ಲಸ್ ಪಾಯಿಂಟ್,ಮುಸ್ಲಿಂ ಲೀಗ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ತಂತ್ರಗಾರಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

[t4b-ticker]
error: Content is protected !!