ಪುತ್ತೂರು: ಫೆ.5 ರಂದು ಮಾಲಾಶ್ರೀ ವಿಜೇತ್ ಅವರ ಮಾಲಕತ್ವದ, ತಮನ್ವಿ ಸಿಲ್ಕ್ ಶೋರೂಮ್ ನ ಉದ್ಘಾಟನಾ ಕಾರ್ಯಕ್ರಮವು ದೀಪ ಪ್ರಜ್ವಲನೆ ಗಣ್ಯ ಅತಿಥಿಗಳ ಸಾನಿಧ್ಯದಲ್ಲಿ ನಡೆಯಿತು.

ನೂತನ ತಮನ್ವಿ ಸಿಲ್ಕ್ ಶೋರೂಮ್ ನನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಈಶ್ವರ ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
ಗುಣಮಟ್ಟ ಕಾಪಾಡುವ ಕೆಲಸ ಮಾಡಿದ್ದೇವೆ
ಎರಡೂವರೆ ವರ್ಷದಿಂದ ಪುತ್ತೂರು ಮುಖ್ಯರಸ್ತೆಯಲ್ಲಿ ಸಂಸ್ಥೆ ನಡೆಸುತ್ತಿದ್ದು, ಸಂಸ್ಥೆಯ ಆರಂಭದ ಸಂದರ್ಭ ಡಾ.ಗೀತಾ ಪ್ರಕಾಶ್ ಅವರು ಇನ್ನೊಂದು ಸಂಸ್ಥೆ ಶೀಘ್ರ ಆರಂಭಿಸುವ ಮಾತನ್ನು ಹೇಳಿದ್ದರು. ಅಲ್ಲಿಂದ ಸ್ವಲ್ಪ ಸಮಯದಲ್ಲೇ ಇನ್ನೊಂದು ಸಂಸ್ಥೆ ಆರಂಭಿಸಲು ನಮಗೆ ಧೈರ್ಯ ಇರಲಿಲ್ಲ. ಆದರೆ ದೇವರ ದಯೆಯಿಂದ ಇನ್ನೊಂದು ಸಂಸ್ಥೆ ಆರಂಭಿಸಿದ್ದೇವೆ.ಗ್ರಾಹಕರನ್ನು ಸೆಳೆಯಲು ನಮ್ಮಲ್ಲಿ ಆಫರ್ ಮೈಂಡ್‌ಸೆಟ್ ಇಲ್ಲದೆ ಗುಣಮಟ್ಟ ಕಾಪಾಡುವ ಕೆಲಸ ಮಾಡಿದ್ದೇವೆ.ಯಾಕೆಂದರೆ ಗ್ರಾಹಕರಿಗೆ ಸೀರೆಯಲ್ಲಿ ತೃಪ್ತಿ ಕಾಣಬೇಕೆಂದು ನಾನು, ಹೆಂಡತಿ ಮಕ್ಕಳು ಜೊತೆಯಾಗಿ ಎಷ್ಟೇ ಕಷ್ಟವಾದರೂ ಬೇರೆ ಬೇರೆ ಕಡೆ ನಾವೇ ಕಲೆಕ್ಷನ್ ಮಾಡುತ್ತಿದ್ದೆವು.ಯುನಿಕ್ ಕಲೆಕ್ಷನ್, ಕ್ವಾಲಿಟಿ ನಮ್ಮ ಗುರಿಯಾಗಿತ್ತು. ಇವತ್ತು ಗ್ರಾಹಕರಿಗೆ ತೃಪ್ತಿಯಾಗಿದೆ ಎಂದು ಭಾವಿಸಿದ್ದೇವೆ. ನಮಗೆ ಕಟ್ಟಡದ ಸೌಲಭ್ಯ ಒದಗಿಸಿದ ಅಮರನಾಥ ಗೌಡ ಅವರು ಬಿಲ್ಡಿಂಗ್ ಓನರ್‌ನಂತೆ ಅಲ್ಲ ನನಗೆ ಸ್ವಂತ ಅಣ್ಣನ ಹಾಗೆ ಸಪೋರ್ಟ್ ಮಾಡಿದ್ದಾರೆ
-ವಿಜೇತ್, ತಮನ್ವಿ ಸಿಲ್ಸ್‌ನ ಮಾಲಕ












































