ಆಲೆಟ್ಟಿ : ಕಮಲ ಸಂಭ್ರಮ – ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಕ್ರೀಡಾಕೂಟ

Picture of Savistara

Savistara

Bureau Report

ಆಲೆಟ್ಟಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಬೂತ್ ಮಟ್ಟದ ಕಾರ್ಯಕರ್ತರ ಕ್ರೀಡಾಕೂಟ ಕಮಲ ಸಂಭ್ರಮವು ಫೆ. 8 ರಂದು ಮಿತ್ತಡ್ಕ ರೋಟರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಲಳಂಬೆ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆಲೆಟ್ಟಿ ಶಕ್ತಿ ಕೇಂದ್ರದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ರವರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಕ್ರೀಡಾಪಟು ಪುರುಷೋತ್ತಮ ಗೌಡ ಕೊಲ್ಟಾರು ರವರು ತೆಂಗಿನ ಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕೃಷ್ಣ ಎಂ. ಆರ್, ಮಂಡಲ ಕಾರ್ಯದರ್ಶಿ ಶಿವಾನಂದ ಸುಬ್ರಹ್ಮಣ್ಯ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನ ಕಟ್ಟೆ,ರೋಟರಿ ಶಾಲೆಯ ಸಂಚಾಲಕರೊ.ಪ್ರಭಾಕರನ್‌ ನಾಯ‌ರ್, ಪಕ್ಷದ ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ಕರುಣಾಕರ ಹಾಸ್ಸಾರೆ ಉಪಸ್ಥಿತರಿದ್ದರು. ಪಕ್ಷದ ಕಾರ್ಯಕರ್ತರಿಗಾಗಿ ವಿವಿಧ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ಪುರುಷರಿಗಾಗಿ ಕ್ರಿಕೆಟ್, ಹಗ್ಗಜಗ್ಗಾಟ, ವಾಲಿಬಾಲ್, ಮಹಿಳೆಯರಿಗಾಗಿ ತ್ರೋಬಾಲ್,ಹಗ್ಗಜಗ್ಗಾಟ, ಸಂಗೀತ ಕುರ್ಚಿ ಸ್ಪರ್ಧೆ ಗಳನ್ನು ಏರ್ಪಡಿಸಲಾಯಿತು.

ಸಮಾರೋಪ ಸಮಾರಂಭ: ಬಹುಮಾನ ವಿತರಣೆ

ಟೀಮ್ ಅಡ್ವಾಣಿ ಕೊಲ್ಟಾರು-ಪ್ರಥಮ,66ದಿನ್ ದಯಾಳ್ ಬಿ ಅಲೆಟ್ಟಿ- ದ್ವಿತೀಯ, ಹಗ್ಗಜಗ್ಗಾಟದಲ್ಲಿ ಅರುಣ್ ಜೇಟ್ಲಿ ಬೂತ್ ಸಂಖ್ಯೆ 3 ಬಾರ್ಪಣೆ ಪ್ರಥಮ,ಅಡ್ವಾಣಿ ಬೂತ್‌ ಸಂಖ್ಯೆ 1ಕೊಲ್ಟಾರ್ ದ್ವಿತೀಯ,ವಾಲಿಬಾಲ್ ಟೀಮ್ ಅಡ್ವಾಣಿ ಎ ಬೂತ್ ಸಂಖ್ಯೆ 1ಕೊಲ್ಟಾರ್ ಪ್ರಥಮ, ಟೀಮ್ ಅಡ್ವಾಣಿ ಬಿ ಬೂತ್ ಸಂಖ್ಯೆ 1ಕೊಲ್ಟಾರ್ ದ್ವಿತೀಯ, ಮಹಿಳೆಯ ತ್ರೋ ಬಾಲ್ ದಿನ್ ದಯಾಳ್. ಬೂತ್ ಸಂಖ್ಯೆ 5 ಅಲೆಟ್ಟಿ ಪ್ರಥಮ, ಟೀಮ್ ಅಡ್ವಾಣಿ ಬೂತ್ ಸಂಖ್ಯೆ 1ಕೊಲ್ವಾರ್ ದ್ವಿತೀಯ, ಹಗ್ಗಜಗ್ಗಾಟ ಟೀಮ್ ಸುಷ್ಮಾ ಸ್ವರಾಜ್ ಸಂಖ್ಯೆ 2 ಪ್ರಥಮ, ಅರುಣ್ ಜೇಟ್ಲಿ ಬೂತ್ ಸಂಖ್ಯೆ 3 ದ್ವಿತೀಯ, ಸಂಗೀತ ಕುರ್ಚಿ ದಿನ್ ದಯಾಳ್ ಅಲೆಟ್ಟಿ ಬಹುಮಾನನ್ನುಗಳಿಸಿಕೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾದ ಶಾಸಕಿ ಕು.ಭಾಗೀರಥಿ ಮುರುಳ್ಯ, ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ, ವಿನಯಕುಮಾರ್ ಕಂದಡ್ಕ, ತೀರ್ಥಕುಮಾ‌ರ್ ಕುಂಚಡ್ಕ, ರಂಜಿತ್ ಎನ್. ಆರ್ ರವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಬೆಳಗ್ಗಿನಿಂದ ಸಂಜೆಯ ತನಕ ನಡೆದ ಸ್ಪರ್ಧೆಯಲ್ಲಿ ಗ್ರಾಮದ 8 ಬೂತಿನ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!