54 ಮಂದಿಗೆ ಕ್ಯಾಬಿನೆಟ್ ಸ್ಥಾನಮಾನ; 32ರಿಂದ 149ಕ್ಕೇರಿದ ಮಂತ್ರಿಗಳ ಸಂಖ್ಯೆ, ಸಿಎಂ ಸಿದ್ದು ತೀರ್ಮಾನಕ್ಕೆ ಭಾರೀ ಟೀಕೆ!

Picture of Savistara

Savistara

Bureau Report

ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಹೊಸ ನೇಮಕಾತಿಗಳ ನಂತರ ವಿಮರ್ಶೆಗಳನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಮಂತ್ರಿ ಪದವಿಗಳ (Cabinet Ministers) ಸಂಖ್ಯೆ 32 ರಿಂದ 149ಕ್ಕೆ ಏರಿಕೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಮತ್ತೊಂದು 54 ಮಂದಿಗೆ ಸಹಾಯಕ ಮಂತ್ರಿ (MoS) ಹುದ್ದೆ (Minister of State) ನೀಡಿದೆ. ಈ ನಿರ್ಣಯ ರಾಜ್ಯದಲ್ಲಿ ಆರ್ಥಿಕ ನಿರ್ವಹಣೆ, ಆಡಳಿತದ ಆದ್ಯತೆಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಇದರಿಂದ ಸಿದ್ದರಾಮಯ್ಯ ಸರ್ಕಾರದ ಮೇಲೆ ವಿಮರ್ಶೆಗಳು ಹರಿದುಬರುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಸಹಾಯಕ ಮಂತ್ರಿ (MoS) ಸ್ಥಾನಮಾನವನ್ನು ಹೊಂದಿರುವ ಒಟ್ಟು ವ್ಯಕ್ತಿಗಳ ಸಂಖ್ಯೆ 149ಕ್ಕೆ ಹೆಚ್ಚಳವಾಗಿದೆ. ಆದರೆ, ಸಂವಿಧಾನದ ಪ್ರಕಾರ ಒಂದು ರಾಜ್ಯದಲ್ಲಿ ಮಂತ್ರಿಗಳ ಸಂಖ್ಯೆಯನ್ನು 34ಕ್ಕೆ ಮಿತಿಗೊಳಿಸಲಾಗಿದೆ. ಸಂವಿಧಾನ ಏನು ಹೇಳುತ್ತೆ ಅಂತ ನೋಡುವುದಾದರೆ, ಅಧಿಕೃತವಾಗಿ 32 ಮಂತ್ರಿಗಳಿಗೆ ಮಾತ್ರ ಅವಕಾಶ ನೀಡಿದೆ. ಆದರೆ ಆ ಮಿತಿಯನ್ನು ಮೀರಿ ಹೊರಗಿರುವ ಮತ್ತೊಂದು 117 ಮಂದಿಗೆ ಕ್ಯಾಬಿನೇಟ್ ಸ್ಥಾನಮಾನಗಳ ಪ್ರೋಟೋಕಾಲ್ ಅನ್ನು ಸರ್ಕಾರ ನೀಡಿದೆ. ಈ ಕ್ರಮಕ್ಕೆ ಪ್ರತಿಪಕ್ಷ ಪಕ್ಷಗಳು, ಆರ್ಥಿಕ ತಜ್ಞರಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತಪಡಿಸುತ್ತಿದ್ದಾರೆ.

ಹೊಸ ನೇಮಕಾತಿಗಳಲ್ಲಿ 43 ಮಂದಿ ಶಾಸಕರು, ಒಂಬತ್ತು ಮಂದಿ ಶಾಸಕರಲ್ಲದವರು, ಸಲಹೆಗಾರರು, ವಿಶೇಷ ಪ್ರತಿನಿಧಿಗಳು ಕ್ಯಾಬಿನೆಟ್ ಸ್ಥಾನಮಾನಕ್ಕೆ ಪದೋನ್ನತಿ ಪಡೆದಿದ್ದಾರೆ. ಅಲ್ಲದೆ, 11 ಮಂದಿ ಶಾಸಕರು, 54 ಮಂದಿ ಶಾಸಕರಲ್ಲದವರನ್ನ ಸಹಾಯಕ ಮಂತ್ರಿ (MoS) ಸ್ಥಾನಮಾನವನ್ನು ನೀಡಿದ್ದಾರೆ. ಹೊಸದಾಗಿ ನೇಮಕಗೊಂಡ ಸಹಾಯಕ ಮಂತ್ರಿ ಸ್ಥಾನ ಪಡೆದುಕೊಂಡವರಲ್ಲಿ, ಸರ್ಕಾರದ ವಿವಿಧ ಮಂಡಳಿಗಳು ಹಾಗೂ ನಿಗಮಗಳಲ್ಲಿ ಪ್ರಮುಖ ಪದವಿಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರಿದ್ದಾರೆ.

ಕ್ಯಾಬಿನೇಟ್ ಸ್ಥಾನಮಾನ ಪಡೆದ ಪ್ರತಿಯೋರ್ವರಿಗೂ ತಿಂಗಳಿಗೆ 50 ಸಾವಿರ ರೂಪಾಯಿ ವೇತನ, 3,000 ರೂಪಾಯಿ ಆತಿಥ್ಯ ಭತ್ಯೆ, 80,000 ಮನೆ ಬಾಡಿಗೆ ಭತ್ಯೆ ಕೂಡಾ ಸಿಗುತ್ತದೆ. ಜೊತೆಗೆ ನಿರ್ವಹಣೆ, ಸಿಬ್ಬಂದಿ ಸೌಲಭ್ಯಗಳಿಗಾಗಿ ತಿಂಗಳಿಗೆ ಹೆಚ್ಚುವರಿಯಾಗಿ 20,000 ಸಾವಿರ ರೂಪಾಯಿ ಸಿಗಲಿದೆ. ಇಷ್ಟೇ ಅಲ್ಲದೇ ಸೌಲಭ್ಯಗಳ ಪ್ಯಾಕೇಜ್‌ನಲ್ಲಿ ತಿಂಗಳಿಗೆ 1,000 ಲೀಟರ್ ಇಂಧನವೂ ಇದೆ, ಅಂದರೆ ಈಗಿನ ದರಗಳ ಅನ್ವಯ ಸುಮಾರು 1,00,000 ರೂಪಾಯಿಗೆ ಆಗುತ್ತದೆ. ಜೊತೆಗೆ ದೈನಂದಿನ ಪ್ರಯಾಣ ಭತ್ಯೆಯ ರೂಪದಲ್ಲಿ 2,000 ರೂಪಾಯಿಯಿಂದ 2,500 ರೂಪಾಯಿ ಸಿಗುತ್ತದೆ.

ವೇತನಗಳು, ಭತ್ಯೆಗಳ ಜೊತೆಗೆ ಈ ಅಧಿಕಾರಿಗಳಿಗೆ ವೈಯಕ್ತಿಕ ಕಾರ್ಯದರ್ಶಿಗಳು, ಸಹಾಯಕರು, ಚಾಲಕರು, ಅಟೆಂಡರ್‌ಗಳಂತಹ ಆಡಳಿತ ಸಿಬ್ಬಂದಿಯನ್ನು ನೀಡುಲಾಗುತ್ತದೆ. ಅವರು ತಮ್ಮ ವೈದ್ಯಕೀಯ ಖರ್ಚುಗಳನ್ನು ಸಂಪೂರ್ಣವಾಗಿ ಮರುಪಾವತಿ ಪಡೆದುಕೊಳ್ಳಬಹುದು. ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜ್ಯ ಮಂತ್ರಿಗಳಂತೆಯೇ ಅವರಿಗೆ ಅಧಿಕೃತ ಗೌರವ, ಪ್ರೋಟೋಕಾಲ್ ಕೂಡಾ ಸಿಗುತ್ತದೆ.

  • ಸಂಬಳ – 50,000/ತಿಂಗಳಿಗೆ
  • ವೈದ್ಯಕೀಯ ಭತ್ಯೆ – 3000 ರೂ
  • ದೈನಂದಿನ ಸಾರಿಗೆ ಭತ್ಯೆ – 2,500 ರೂ
  • ಇಂಧನ ಭತ್ಯೆ – 1,00,000 ರೂ/ತಿಂಗಳಿಗೆ
  • ಮನೆ ಬಾಡಿಗೆ ಭತ್ಯೆ – 20,000 ರೂ/ ತಿಂಗಳಿಗೆ
  • ಸಿಬ್ಬಂದಿ ಮತ್ತು ಸೌಲಭ್ಯ – 20,000 ರೂ/ ತಿಂಗಳಿಗೆ
  • ಒಟ್ಟು – ಅಂದಾಜು 3,13,000 ರೂಪಾಯಿ ಪ್ರತಿ ತಿಂಗಳಿಗೆ

ಕರ್ನಾಟಕ ಸರ್ಕಾರ ಈಗಾಗಲೇ ತನ್ನ ಪ್ರಮುಖ ಗ್ಯಾರಂಟಿ ಯೋಜನೆಗಳಿಗೆ ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಈಗ ಸಮಾಜವಾದಿ ನಾಯಕರು ಏರನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಉನ್ನತ ಮಟ್ಟದ ವ್ಯಕ್ತಿಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುವುದರಿಂದ ರಾಜ್ಯ ಖಜಾನೆಗೆ ಮತ್ತಷ್ಟು ಭಾರವಾಗುತ್ತದೆ ಎಂದು ಪ್ರತಿಪಕ್ಷ ನಾಯಕರು, ಆರ್ಥಿಕ ತಜ್ಞರು ಟೀಕಿಸುತ್ತಿದ್ದಾರೆ. ಪಕ್ಷದ ನಾಯಕರಿಗಾಗಿ ಸಾರ್ವಜನಿಕ ಹಣವನ್ನು ಹೀಗೆ ಖರ್ಚು ಮಾಡುವುದು ಸರಿಯಲ್ಲ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್, ಮುಖ್ಯಮಂತ್ರಿಗಳ ರಾಜಕೀಯ, ಹಣಕಾಸು, ಕಾನೂನು, ಮಾಧ್ಯಮ ಸಲಹೆಗಾರರು, ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು ಸೇರಿ ಎಷ್ಟು ಜನರು ಸಚಿವ ಸ್ಥಾನಮಾನ ಪಡೆದಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ನಿಮಗ ಮಂಡಳಿಗಳಿಗೆ ಅನುದಾನವನ್ನೇ ಕೊಡದ ಸರ್ಕಾರ ಈಗ ಈ ರೀತಿ ಮಾಡಿರೋದು ಜನರು ತೆರಿಗೆ ಹಣ ಪೋಲು ಮಾಡುತ್ತಿದೆ. ಕೂಡಲೇ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕೇವಲ ತಮ್ಮ ಹೊಗಳುಭಟ್ಟರು ಎಂಬ ಕಾರಣಕ್ಕೆ, ನಿಗಮ ಮಂಡಳಿ ಅಧ್ಯಕ್ಷರಿಗೆ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದು ಟೀಕಿಸಿದೆ. ಶಾಸಕರು, ಪಕ್ಷದ ಹಿರಿಯ ನಾಯಕರು ಅಸಮಾಧಾನಗೊಳ್ಳದಂತೆ ಇರಲು ಈ ಪದವಿಗಳನ್ನು ನೀಡಿದ್ದಾರೆ ಎಂದು ವಿಮರ್ಶೆಗಳು ಬರುತ್ತಿವೆ. ಇದು ಆರ್ಥಿಕ ಜವಾಬ್ದಾರಿಯುತವಲ್ಲದ್ದು, ಸರ್ಕಾರ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುತ್ತಿದೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿವೆ. ಆದರೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

[t4b-ticker]
error: Content is protected !!