RSS ಕಾರ್ಯಕ್ರಮಕ್ಕೆ ಹಾಜರು; ಶಿವಸೇನೆಯ ಉದ್ದವ್ ಠಾಕ್ರೆಗಿಂತ ಸಲ್ಮಾನ್ ಖಾನ್ ಹೆಚ್ಚು ಹಿಂದೂ; ಬಿಜೆಪಿ ಸಚಿವ ನಿತೇಶ್ ರಾಣೆ

Picture of Savistara

Savistara

Bureau Report

ಮುಂಬೈ: ಕಳೆದ ಶನಿವಾರ(ಫೆ.07) ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗವಹಿಸಿದ್ದು, ದೇಶದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಹಲವು ಪಕ್ಷಗಳು ಪರ ವಿರೋಧ ಚರ್ಚೆಯಲ್ಲಿ ತೊಡಗಿವೆ.

ಈ ಕುರಿತು ಮಾತನಾಡಿದ್ದ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯ ನಾಯಕ ಸಂಜಯ್ ರಾವತ್, ಆರ್​​ಎಸ್​ಎಸ್ ಕಾರ್ಯಕ್ರಮಕ್ಕೆ ನಟ ಸಲ್ಮಾನ್ ಖಾನ್ ತೆರಳಿದ್ದು, ಜನಸಮೂಹನ್ನು ಸೆಳೆಯಲು, ಮುಸ್ಲಿಮರು ಸಂಘಕ್ಕೆ ಬರಬಹುದು ಎಂಬುದನ್ನು ಪ್ರಚಾರ ಮಾಡಲು ಕರೆಸಲಾಗಿದೆ. ಬಲವಂತದಿಂದ ಅವರನ್ನು ಕರೆಸಲಾಗಿತ್ತು ಎಂದು ಆರೋಪಿಸಿದ್ದರು.ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಸಚಿವ ನಿತೇಶ್ ರಾಣೆ, ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಸಲ್ಮಾನ್ ಖಾನ್ ಉದ್ಧವ್ ಗಿಂತ ಹೆಚ್ಚು ಹಿಂದೂ. ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಧೈರ್ಯ ತೋರಿದ್ದಾರೆ ಎಂದು ಹೇಳಿದ್ದಾರೆ.

ಶಿವಸೇನಾ ನಾಯಕ ಮತ್ತು ಡಿಸಿಎಂ ಏಕನಾಥ್ ಶಿಂಧೆ ಸಹ, ಸಲ್ಮಾನ್ ಖಾನ್ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹಾಜರಾಗುವುದರಲ್ಲಿ ಏನಿದೆ? ಅವರು ಭಾರತೀಯ ಪ್ರಜೆಯಲ್ಲವೇ? ಅವರು ಮನೆಯಲ್ಲಿ ಗಣೇಶನನ್ನು ಕೂರಿಸುತ್ತಾರೆ. ಎಲ್ಲವನ್ನೂ ಮಾಡುತ್ತಾರೆ, ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಮೋಹನ್ ಭಾಗವತ್ ಅವರ ಕಾರ್ಯಕ್ರಮಕ್ಕೆ ಹಾಜರಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಮುಂಬೈ ನಿವಾಸಿ, ಮುಂಬೈ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನ್ನು ರಾಜಕೀಯ ಮಾಡಬಾರದು ಎಂದಿದ್ದಾರೆ.ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಮಾತನಾಡಿ, ಸಲ್ಮಾನ್ ಖಾನ್ ಒಬ್ಬ ನಟ ಮತ್ತು ಅವರು ದೇಶದಲ್ಲಿ ಗೌರವದಿಂದ ಬದುಕಬೇಕು. ಆಡಳಿತ ಪಕ್ಷದ ಜನರು ಏನಾದರೂ ಹೇಳಿದರೆ, ಅದನ್ನು ನಿರಾಕರಿಸುವ ಧೈರ್ಯ ಸಲ್ಮಾನ್ ಖಾನ್ ಅವರಿಗೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಸರ್ಕಾರದ ಒತ್ತಡದಿಂದ ಅಲ್ಲಿಗೆ ಹೋಗಿರಬೇಕು ಎಂದು ಹೇಳಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!