ಬಳಂಜ: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ಅಧ್ಯಯನಕ್ಕಾಗಿ ಟಿಪ್ಪರ್ ಮತ್ತು ಪಿಕಪ್ ನಲ್ಲಿ ಕರೆದುಕೊಂಡು ಹೋಗಿರುವ ಪ್ರಕರಣ ಸಂಬಂಧ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿದ ಬೆನ್ನಲ್ಲೇ, ಟಿಪ್ಪರ್ ಹಾಗೂ ಪಿಕಪ್ ಮಾಲಕರ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ಎಸ್ ಪಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ
ಫೆ: 09 ರಂದು ಬೆಳ್ತಂಗಡಿ ತಾಲೂಕು ಬಳಂಜ ಗ್ರಾಮದ ಪರಾರಿ ಎಂಬಲ್ಲಿ ಬಳಂಜ- ನಾಲ್ಕೂರು ಸಾರ್ವಜನಿಕ ರಸ್ತೆಯಲ್ಲಿ ಬಳಂಜ ಕಡೆಯಿಂದ ಟಿಪ್ಪರ್ ಲಾರಿ ನಂಬ್ರ KA70 2596 ಮತ್ತು ಫಿಕ್ ಅಫ್ ನಂಬ್ರ KA21A8776 ನೇದರಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ನಾಲ್ಕೂರು ಎಂಬಲ್ಲಿಯ ನರ್ಸರಿಗೆ ಅಧ್ಯಯನಕ್ಕೆ ಕರೆದುಕೊಂಡು ಹೋಗಿದ್ದು ಈ ಬಗ್ಗೆ ಧರಣೇಂದ್ರ, ಬಳಂಜ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನ ಅನ್ವಯ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 14/2026 ಕಲಂ: 281 BNS ಮತ್ತು ಕಲಂ: 66 ಜೊತೆಗೆ 192(ಎ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ ಶಾಲೆಯವರ ಬಗ್ಗೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













































