ರೆಜಿನಗರ(ಮುರ್ಷಿದಾಬಾದ್): ಯಾರೇ ವಿರೋಧಿಸಿದರೂಮುಂದಿನ ಎರಡು ವರ್ಷಗಳ ಒಳಗೆ ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ರಚನೆ ಪೂರ್ಣಗೊಳ್ಳುತ್ತದೆ ಎಂದು ಜನ್ ಉನ್ನಯನ್ ಪಕ್ಷದ ಸಂಸ್ಥಾಪಕ ಹುಮಾಯೂನ್ ಕಬೀರ್ ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ.ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹುಮಾಯೂನ್ “ನನಗೆ ತುಂಬಾ ಸಂತೋಷವಾಗಿದ್ದು, ನಾನು ಸರ್ವಶಕ್ತನಿಗೆ ಧನ್ಯವಾದ ಹೇಳುತ್ತೇನೆ. ಇಂದು ನನ್ನೊಂದಿಗೆ ಅನೇಕ ಜನರು ನಿಂತಿದ್ದಾರೆ, ಮತ್ತು ನಾನು ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇತರರು ನನ್ನನ್ನು ವಿರೋಧಿಸಲಿ. ಮುಂದಿನ ಎರಡು ವರ್ಷಗಳಲ್ಲಿ, ಬಾಬರಿ ಮಸೀದಿ ರಚನೆ ಪೂರ್ಣಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.ದೇವಾಲಯಗಳನ್ನು ನಿರ್ಮಿಸುವುದು ಸರಿ, ಆದರೆ ಒಬ್ಬ ಮುಸ್ಲಿಂ ಮಸೀದಿ ನಿರ್ಮಿಸಲು ಬಯಸಿದರೆ, ಅವರು ಅದನ್ನು ವಿರೋಧಿಸುತ್ತಿದ್ದಾರೆ. ನಾವು ಅವರನ್ನು ಅಧಿಕಾರದಿಂದಲೇ ಹೊರಹಾಕುತ್ತೇವೆ” ಎಂದು ಹೇಳಿದ್ದಾರೆ.ಕಳೆದ ವರ್ಷ ಡಿಸೆಂಬರ್ 6 ರಂದು ಹುಮಾಯೂನ್ ಕಬೀರ್ ಮುರ್ಷಿದಾಬಾದ್‌ನ ಬೆಲ್ಲಂಗಾದಲ್ಲಿ ‘ಬಾಬರಿ ಮಸೀದಿ’ಗೆ ಅಡಿಪಾಯ ಹಾಕಿದ್ದರು. ಹಲವು ವಿವಾದಾತ್ಮಕ ಹೇಳಿಕೆಗಳು ಬಳಿಕ ಬಾಬರಿ ಮಸೀದಿ ನಿರ್ಮಾಣಕ್ಕೆ ಮುಂದಾದ ಬಳಿಕ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಹುಮಾಯೂನ್ ಕಬೀರ್ ಅವರನ್ನು ಹೊರ ಹಾಕಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಪಕ್ಷಕ್ಕೆ ಹಾನಿಯಾಗಬಹುದೆಂಬ ಲೆಕ್ಕಾಚಾರವನ್ನೂ ಮಾಡಿ ಟಿಎಂಸಿ ಪಕ್ಷದಿಂದ ಹೊರ ಹಾಕಿತ್ತು ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗಿದೆ.













































