ಹೈದ್ರಾಬಾದ್​​ನಲ್ಲಿ ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಸೈಬರ್​ ವಂಚಕರ ಹೆಡೆಮುರಿ ಕಟ್ಟಿದ್ರು

Picture of Savistara

Savistara

Bureau Report

ಮಂಗಳೂರು: ವಿದೇಶದಲ್ಲಿದ್ದವರ ಜೊತೆ ಕೈಜೋಡಿಸಿ ಸೈಬರ್ ಕ್ರೈಂ ಮಾಡುತ್ತಿದ್ದ ಆರು ಜನರ ತಂಡವನ್ನು ಹೈದರಾಬಾದ್​​ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ . ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಬಂಧಿತರು. ದುರುಳರು ನಿನ್ನೆ ಒಂದೇ ದಿನ 2 ಕೋಟಿ ರೂ ವಹಿವಾಟು ಮಾಡಿದ್ದಾರೆ. ಬ್ಯಾಂಕ್ ಖಾತೆದಾರರಿಗೆ 4 ರಿಂದ 6% ಕಮಿಷನ್ ನೀಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜಾಹಿರಾತು ನೀಡುತ್ತಿದ್ದರು. ಅದನ್ನು ನಂಬಿ ಬಂದವರಿಂದ ಓಟಿಪಿ ಪಡೆದು ವಿದೇಶಕ್ಕೆ ರವಾನಿಸುತ್ತಿದ್ದರು. ಅಲ್ಲಿರುವ ಸೈಬರ್ ಕ್ರೈಂ ಖದೀಮರು ಹಣ ಎಗರಿಸುತ್ತಿದ್ದರು. ಸದ್ಯ ಮಂಗಳೂರಿನ ಮೊಹ್ಮದ್​ ಇಕ್ಬಾಲ್​ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿಗಳು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ 18 ಮೊಬೈಲ್, 12 ಸಿಮ್ ಕಾರ್ಡ್,​ 1 ಲ್ಯಾಪ್ ಟಾಪ್, 15 ಚೆಕ್​ಬುಕ್, 18 ಡೆಬಿಟ್ ಕಾರ್ಡ್​ ಮತ್ತು 12 ಬ್ಯಾಂಕ್ ಪಾಸ್ ಬುಕ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!