ಇರಾನ್ ಮೇಲೆ ಇಸ್ರೇಲ್ ಅಮೇರಿಕಾ ಜಂಟಿ ದಾಳಿ : ವಾಯುಮಾರ್ಗ ಮುಚ್ಚಿದ ಗಲ್ಫ್ ರಾಷ್ಟ್ರಗಳು :ಮಂಗಳೂರಿನಿಂದ ಗಲ್ ದೇಶಗಳಿಗೆ ತೆರಳಬೇಕಿದ್ದ ವಿಮಾನಗಳು ತುರ್ತು ಲ್ಯಾಂಡಿಂಗ್ – ಹಲವಾರು ರದ್ದು..!

Picture of Savistara

Savistara

Bureau Report

ಮಂಗಳೂರು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಜಂಟಿಯಾಗಿ ದಾಳಿ ನಡೆಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ಗೆ ತೆರಳುವ, ಆಗಮಿಸುವ ವಿಮಾನಯಾನ ಸಂಚಾರಗಳು ರದ್ದಾಗಿವೆ.

ಇರಾನ್ ಮೇಲೆ ದಾಳಿ ಪ್ರಾರಂಭವಾಗುವ ಮುಂಚೆಯೇ ಮಂಗಳೂರಿನಿಂದ ದೋಹಾಕ್ಕೆ ತೆರಳಲು ಟೇಕಾಫ್ ಆಗಿದ್ದ ಏ‌ರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ 7 ಗಂಟೆಗೆ ಲ್ಯಾಂಡ್ ಆಗಲಿದೆ.

ಮಧ್ಯಾಹ್ನ 1.20ಕ್ಕೆ ಮಂಗಳೂರಿನಿಂದ ದುಬೈಗೆ ಹೋರಡಬೇಕಿದ್ದ IX 831 IXE-DXB ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ರದ್ದುಗೊಳಿಸಲಾಗಿದೆ.ಮಧ್ಯಾಹ್ನ 3 ಗಂಟೆಗೆ ಏ‌ರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ರದ್ದುಗೊಳಿಸಿರುವುದನ್ನು ತಿಳಿಸಿತು.ವಿಮಾನದಲ್ಲಿ ತೆರಳಲು 174 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಸಿದ್ಧರಾಗಿದ್ದರು ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

ಯಾವ್ಯಾವ ವಿಮಾನಗಳು ರದ್ದು..?

ಮಧ್ಯಾಹ್ನ 1.20ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಾಗಿದ್ದ IX 831 IXE DXB ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರದ್ದಾಗಿದೆ.

ಬೆಳಿಗ್ಗೆ 11.17ಕ್ಕೆ ಮಂಗಳೂರಿನಿಂದ ದೋಹಾಕ್ಕೆ ಹೊರಟ IX 821 IXE-DOH 2 2 2 ವಿಮಾನವನ್ನು ಮಾರ್ಗ ಬದಲಾಯಿಸಿ ಮುಂಬೈನಲ್ಲಿ ಇಳಿಸಲಾಗಿದೆ.

ರಾತ್ರಿ 7.15ಕ್ಕೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ 6E 1467 IXE-DXB 2 2 ರದ್ದುಗೊಳಿಸಲಾಗಿದೆ.ರಾತ್ರಿ 11.10ಕ್ಕೆ ಮಂಗಳೂರಿನಿಂದ ದಮಾಮ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX847 IXE-DMM .ರಾತ್ರಿ 8.15ಕ್ಕೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX813 IXE DXB ರದ್ದಾಗಿದೆ.ರಾತ್ರಿ 10.05ಕ್ಕೆ ಮಂಗಳೂರಿನಿಂದ ಕುವೈತ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX851 IXE KWI ರದ್ದು ಮಾಡಲಾಗಿದೆ.ರಾತ್ರಿ 11.20ಕ್ಕೆ ಮಂಗಳೂರಿನಿಂದ ಅಬುದಾಬಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX815 IXE-AUH .ಮಧ್ಯಾಹ್ನ 2.15ಕ್ಕೆ ದೋಹಾದಿಂದ ಹೊರಟು ಮಂಗಳೂರಿಗೆ ರಾತ್ರಿ 8.45ಕ್ಕೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX822 DOH-IXE ರದ್ದಾಗಿದೆ.

ಸಂಜೆ 5 ಗಂಟೆಗೆ ದುಬೈನಿಂದ ಹೊರಟು ಮಂಗಳೂರಿಗೆ ರಾತ್ರಿ 10.10ಕ್ಕೆ ತಲುಪಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX832 DXB-IXE ರದ್ದಾಗಿದೆ.

[t4b-ticker]
error: Content is protected !!