ಬೀದರ್: ಇರಾನಿನ ಸರ್ವೊಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಖಂಡಿಸಿ ಶಿಯಾ ಮುಸ್ಲಿಮರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಚಿದ್ರಿ ರಸ್ತೆಯಲ್ಲಿರುವ ಇರಾನಿ ಕಾಲೊನಿಯಲ್ಲಿ ನೆಲೆಸಿರುವ ಶಿಯಾ ಮುಸ್ಲಿಮರು ಖಮೇನಿ ಅವರ ಭಾವಚಿತ್ರ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು.
ಖಮೇನಿ ಪರ ಹಾಗೂ ಅಮೆರಿಕ, ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಹಾಕಿದರು. ಕಪ್ಪು ವರ್ಣದ ವಸ್ತ್ರ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.’ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಇರಾನಿನ ಮೇಲೆ ದಾಳಿ ನಡೆಸಿ, ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಮಾಡಿರುವುದು ತೀವ್ರ ಖಂಡನಾರ್ಹ. ಯಾವುದೇ ಸಕಾರಣವಿಲ್ಲದೇ ಮತ್ತೊಂದು ರಾಷ್ಟ್ರದ ಮೇಲೆ ದಾಳಿ ನಡೆಸಿ, ಅಲ್ಲಿನ ಸರ್ವೊಚ್ಚ ನಾಯಕನನ್ನು ಹತ್ಯೆಗೈದಿರುವ ಕ್ರಮ ಸರಿಯಲ್ಲ. ವಿಶ್ವ ಸಮುದಾಯ ಇದನ್ನು ಖಂಡಿಸಬೇಕು’ ಎಂದು ಆಗ್ರಹಿಸಿದರು.













































