ಇಸ್ರೇಲ್ – ಇರಾನ್ ಸಂಘರ್ಷ: ಭಾರತದ ಮೇಲೆ ನೇರ ಮತ್ತು ಪರೋಕ್ಷವಾಗಿ ಬೀರುವ ಪರಿಣಾಮಗಳು

Picture of Savistara

Savistara

Bureau Report

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ದಿನೇ ದಿನೇ ಹೆಚ್ಚುತ್ತಿರುವ ಸಂಘರ್ಷವು ಈಗ ಕೇವಲ ಪ್ರಾದೇಶಿಕ ಸಮರವಾಗುಳಿಯದೆ ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಈ ಎರಡು ಬಲಾಢ್ಯ ರಾಷ್ಟಗಳ ನಡುವಿನ ಉದ್ವಿಗ್ನತೆಯು ವಿಶ್ವದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಬುಡಮೇಲು ಆಗುವ ಮುನ್ಸೂಚನೆ ಕಾಣುತ್ತಿದೆ.

ವಿಶೇಷವಾಗಿ ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರದ ಮೇಲೆ ಅವಲಂಬಿತ ದೇಶಗಳಿಗೆ ಇದು ಮಹತ್ವದ ವಿಷಯವಾಗಲಿದೆ ಎಂದು ಅಂತರರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬಿಕ್ಕಟ್ಟಿನ ಇತಿಹಾಸ ಗಮನಿಸಿದರೆ 2023ರ ಅಕ್ಟೋಬರ್ 7ರಂದು ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ನಡ್ಡೆಸಿದ್ದೆ ಈಗಿನ ಪರಿಸ್ಥಿತಿಗೆ ಕಾರಣ. ಈ ದಾಳಿಗೆ ಪ್ರಸ್ತುತ ಇರಾನ್ ಬೆಂಬಲವಿದೆ ಎಂಬ ಆರೋಪಗಳಿಂದ ಎರಡು ರಾಷ್ಟಗಳ ನಡುವಿನ ವೈಮನಸ್ಸು ಹೆಚ್ಚಾಗಿದೆ.

ಭಾರತದ ಮೇಲೆ ಬೀರುವ ಪ್ರಭಾವಗಳು:

1. ತೈಲ ಬೆಲೆ ಏರಿಕೆ

ಭಾರತವು ತನ್ನ ಕಚ್ಚಾ ತೈಲದ ಅಗತ್ಯಕ್ಕಾಗಿ ಬಹುಪಾಲು ಮಧ್ಯಪ್ರಾಚ್ಯ ರಾಷ್ಟ್ರಗಳನ್ನೇ ಅವಲಂಬಿಸಿದ ಕಾರಣ ಭಾರತ ಮಧ್ಯಪ್ರಾಚ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಯುದ್ಧದ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಬಹುದು ಸಾರಿಗೆ ವೆಚ್ಚ ಹೆಚ್ಚಳವಾಗಿ ಜನ ಸಾಮಾನ್ಯರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

2. ಪ್ರವಾಸಿ ಕನ್ನಡಿಗರು ಮತ್ತು ಭಾರತೀಯರ ರಕ್ಷಣೆ

ಮಧ್ಯಪ್ರಾಚ್ಯದ ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ ಅನೇಕ ಕನ್ನಡಿಗರೂ ಇದ್ದಾರೆ. ಸಂಘರ್ಷದ ವಾತಾವರಣ ನಿರ್ಮಾಣವಾದರೆ ವಿಮಾನಯಾನ ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಈಗ ಕೇಂದ್ರ ಸರ್ಕಾರದ ಮುಂದಿರುವ ದೊಡ್ಡ ಸವಾಲು.

3. ಭಾರತದ ರಾಜತಾಂತ್ರಿಕ ಸವಾಲು

ಭಾರತಕ್ಕೆ ಇಸ್ರೇಲ್ ಮತ್ತು ಇರಾನ್ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವಿರುವುದರಿಂದ ಸಮತೋಲನದ ರಾಜತಾಂತ್ರಿಕ ನೀತಿ ಅಗತ್ಯವಾಗಿದೆ. ತಜ್ಞರ ಪ್ರಕಾರ ಪರಿಸ್ಥಿತಿ ಇನ್ನಷ್ಟು ಗಂಭೀರವಾದರೆ ಜಾಗತಿಕ ಆರ್ಥಿಕತೆಗೂ ಹೊಡೆತ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಭಾರತ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ವಿದೇಶದಲ್ಲಿರುವ ನಾಗರಿಕರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.

[t4b-ticker]
error: Content is protected !!