ತೆಹ್ರಾನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮತ್ತು ಇಸ್ರೇಲ್ ವಾಯುಪಡೆಯ ಕಮಾಂಡರ್ ಅವರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೋಮವಾರ ಹೇಳಿದ್ದಾರೆ.ಫಾರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ “ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನ ಮಂತ್ರಿಯ ಕಚೇರಿ ಹಾಗೂ ಆಡಳಿತದ ವಾಯುಪಡೆಯ ಕಮಾಂಡರ್ ಅವರ ಪ್ರಧಾನ ಕಚೇರಿಯನ್ನು ನಿಖರವಾಗಿ ಗುರಿಯಾಗಿಸಿಕೊಂಡಿದ್ದೇವೆ” ಎಂದು IRGC ಹೇಳಿದೆ.ದಾಳಿಯಲ್ಲಿ ‘ಖೈಬರ್’ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಕ್ಷಿಪಣಿಗಳು ದೂರವ್ಯಾಪಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ ಎಂಬುದು ಇರಾನ್ ಮೂಲಗಳ ಹೇಳಿವೆ.ಈ ದಾಳಿಯಿಂದ ಉಂಟಾದ ಹಾನಿ, ಗಾಯಾಳುಗಳ ಬಗ್ಗೆ ತಕ್ಷಣದ ವಿವರ ಲಭ್ಯವಾಗಿಲ್ಲ. ಇಸ್ರೇಲ್ ಸರ್ಕಾರದಿಂದ ಈ ಕುರಿತಾಗಿ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ.
ಖೈಬರ್ ಕ್ಷಿಪಣಿಯಿಂದ ನೆತನ್ಯಾಹು ಕಚೇರಿ ಗುರಿಯಾಗಿಸಿ ದಾಳಿ: ಇರಾನ್ ಹೇಳಿಕೆ
Savistara
Bureau Report
[t4b-ticker]


















































