ದುಬೈ, ಮಾ. 2: ದುಬೈ ಮೂಲದ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಸೋಮವಾರ ಸಂಜೆಯಿಂದ ಸೀಮಿತ ಸಂಖ್ಯೆಯ ವಿಮಾನಗಳ ಹಾರಾಟವನ್ನು ಮರುಪ್ರಾರಂಭಿಸುವುದಾಗಿ ಪ್ರಕಟಿಸಿದೆ.
Advertisement

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆಗಳನ್ನು ನಿಯಮಿತವಾಗಿ ಮರುಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.
Advertisement

“ಈ ಹಂತದಲ್ಲಿ ಈ ಹಿಂದೆ ಬುಕಿಂಗ್ ಮಾಡಿರುವ ಪ್ರಯಾಣಿಕರಿಗೆ ಆದ್ಯತೆ ನೀಡಲಾಗುತ್ತದೆ. ಸೀಮಿತ ಹಾರಾಟಗಳಲ್ಲಿ ಪ್ರಯಾಣಿಸಲು ಮರುಬುಕಿಂಗ್ ಮಾಡಲಾದ ಗ್ರಾಹಕರನ್ನು ಎಮಿರೇಟ್ಸ್ ನೇರವಾಗಿ ಸಂಪರ್ಕಿಸಲಿದೆ,” ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
Advertisement

ಪ್ರಯಾಣಿಕರು ಸೂಚನೆ ಇಲ್ಲದೆ ವಿಮಾನ ನಿಲ್ದಾಣಕ್ಕೆ ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ನೇರವಾಗಿ ಮಾಹಿತಿ ನೀಡದ ಹೊರತು ವಿಮಾನ ನಿಲ್ದಾಣಕ್ಕೆ ಬರಬೇಡಿ ಎಂದು ಮನವಿ ಮಾಡಲಾಗಿದೆ.
Advertisement

ಇದಲ್ಲದೆ ಮುಂದಿನ ಅಧಿಕೃತ ಸೂಚನೆ ಬರುವವರೆಗೆ ಉಳಿದ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ.
Advertisement









































