ಸತತ ಮೂರನೇ ದಿನವೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ: ಈಗ ವಿಶ್ವಕ್ಕೆ ದುಃಸ್ವಪ್ನವಾಗುತ್ತಿದೆ ಹಾರ್ಮುಜ್ ಜಲಸಂಧಿ

Picture of Savistara

Savistara

Bureau Report

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸತತ ಮೂರನೇ ದಿನವೂ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ.ಹಾರ್ಮುಜ್‌ ಜಲಸಂಧಿಯ ಮೂಲಕ ತೈಲ ಸಾಗಣೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು ತೈಲ ಪೂರೈಕೆಯಲ್ಲಿ ತೀವ್ರ ಅಡಚಣೆ ಉಂಟಾಗುವ ಭೀತಿ ಈಗ ಹೂಡಿಕೆದಾರರ ಆತಂಕ ಹೆಚ್ಚಿಸಿದೆ.

ಸೋಮವಾರ ಐಸಿಇ ಬ್ರೆಂಟ್ ಕಾಂಟ್ರಾಕ್ಟ್ ನಲ್ಲಿ ತೈಲ ದರವು 82.37ಡಾಲರ್‌ಗೆ ಏರಿಕೆ ಕಂಡಿದ್ದು, ಇದು ಜನವರಿ 2025 ನಂತರದ ಗರಿಷ್ಠ ಮಟ್ಟ ಎಂದು ಗುರುತಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಭಾರತೀಯ ಕಾಲಮಾನ 4ರ ವೇಳೆಗೆ ಕಚ್ಚಾ ತೈಲದ ವಹಿವಾಟು ಬ್ಯಾರೆಲ್‌ಗೆ 1.70 ಡಾಲರ್ ಅಥವಾ 2.2 ಶೇಕಡಾ ಏರಿಕೆ ಕಂಡು 78.44 ಡಾಲರ್‌ಗೆ ತಲುಪಿತು ಎಂದು ಮಾಧ್ಯಮಗಳು ವರದಿ ಮಾಡಿದೆ.ಈಗ ಕಾಣಿಸಿಕೊಂಡಿರುವ ಉದ್ವಿಗ್ನತೆ ಬೇಗನೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹಾರ್ಮುಜ್ ಜಲಸಂಧಿ ಬಹುತೇಕ ಮುಚ್ಚಲ್ಪಟ್ಟಂತೆಯೇ ಇದೆ. ಸಂಘರ್ಷ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಜಿ ಮಾರುಕಟ್ಟೆ ವಿಶ್ಲೇಷಕ ಟೋನಿ ಸೈಕಾಮೋ‌ರ್ ಅಭಿಪ್ರಾಯಿಸಿದ್ದಾರೆ.ಹಾರ್ಮುಜ್‌ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ದ್ವಾರವಾಗಿದ್ದು, ಇಲ್ಲಿ ನಡೆಯುವ ಯಾವುದೇ ಬೆಳವಣಿಗೆ ವಿಶ್ವದ ಪೂರೈಕೆ ಸರಪಳಿ ಮೇಲೆ ನೇರ ಪರಿಣಾಮ ಬೀರುತ್ತದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!