ದಿನ ಭವಿಷ್ಯ, ಮಾರ್ಚ್ 4, 2026: ರವಿಯ ಪ್ರಭಾವದಿಂದ ಇಂದು ಧನಾಗಮನ

Picture of Savistara

Savistara

Bureau Report

ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಉತ್ತರ ಫಾಲ್ಗುಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ:

ಇಂದು ಉತ್ತರ ಫಾಲ್ಗುಣ ನಕ್ಷತ್ರ ಇದ್ದು ಇದರ ಅಧಿಪತಿ ರವಿ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ ಹಣಕಾಸಿನ ಬಗ್ಗೆ ಅಡೆತಡೆಗಳು ಬರಬಹುದು.

ವೃಷಭ ರಾಶಿ:

ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಮನೆಯ ತೊಂದರೆ ಜಾಸ್ತಿಯಾಗಬಹುದು. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ನೀವು ಬುದ್ದಿವಂತಿಕೆಯನ್ನು ಬಳಸಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಮಿಥುನ ರಾಶಿ:

ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಉತ್ತಮ ಲಕ್ಷಣ ಗೋಚರವಾಗುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರಿಂದ ಸಹಕಾರ ಸಿಗುವುದಿಲ್ಲ.

ಕಟಕ ರಾಶಿ:

ಕಟಕ ರಾಶಿಯವರು ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಬಂಧು- ಬಳಗದ ಜೊತೆ ಖುಷಿಯಿಂದ ಸಮಯ ಕಳೆಯಬಹುದು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಮಧ್ಯಾಹ್ನ ಬಳಿಕ ನಿಮ್ಮ ಕುಟುಂಬದ ಜತೆ ಸಮಯ ಕಳೆಯುತ್ತೀರಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಮುಂದಿನ ಕೆಲಸ ಕಾರ್ಯಗಳಿಗೆ ಉತ್ತಮ ಮಾರ್ಗದರ್ಶನ ಸಿಗಬಹುದು.

ತುಲಾ ರಾಶಿ:

ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೆ ಇಷ್ಟಾರ್ಥ ಸಿದ್ಧಿಯಾಗಲಿದೆ. ಆದರೆ ಮಧ್ಯಾಹ್ನ ಬಳಿಕ ಸ್ನೇಹಿತರ ಜತೆ ಕಲಹ ಉಂಟಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಜಾಸ್ತಿಯಾಗಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ.

ಧನಸ್ಸು ರಾಶಿ:

ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಜಯ ಕಾಣುತ್ತೀರಿ.

ಮಕರ ರಾಶಿ:

ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ಕಷ್ಟ- ತೊಂದರೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕುಂಭರಾಶಿ:

ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಅತ್ಯುತ್ತಮ ದಿನವಾಗಲಿದೆ. ಮಧ್ಯಾಹ್ನ ಬಳಿಕ ಮುಖ್ಯ ಸಂಬಂಧದಲ್ಲಿ ಒಡಕು ಮೂಡಬಹುದು.

ಮೀನ ರಾಶಿ

ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಉತ್ತಮ ದಿನವಾಗಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ಬ್ಯುಸಿ ಇರುತ್ತೀರಿ. ಮಧ್ಯಾಹ್ನ ಬಳಿಕ ಮನೆಯವರ ಜತೆ ಸಮಯ ಕಳೆಯುತ್ತೀರಿ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!