ಇರಾನ್‌ನಲ್ಲಿ ಮರಣಮೃದಂಗ: ದಾಳಿಗೆ ಬಲಿಯಾದವರ ಸಂಖ್ಯೆ 1,045ಕ್ಕೆ ಏರಿಕೆ!

Picture of Savistara

Savistara

Bureau Report

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್(Middle East War) ಮೇಲೆ ನಡೆಸುತ್ತಿರುವ ದಾಳಿಯ ಕಾರ್ಯಾಚರಣೆಯು ಐದನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಇರಾನ್ ಸರ್ಕಾರದ ವರದಿಯ ಪ್ರಕಾರ, ಈವರೆಗೆ ನಡೆದ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,045ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಶ್ರೀಲಂಕಾ ಕರಾವಳಿಯ ಸಮೀಪ ಅಮೆರಿಕದ ಸಬ್‌ಮರಿನ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪ್ರಮುಖ ಯುದ್ಧನೌಕೆ ಜಲಸಮಾಧಿಯಾಗಿದ್ದು, 80 ಮಂದಿ ನಾಮಾವಶೇಷವಾಗಿದ್ದಾರೆ.ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್‌ನ ‘ರೋರಿಂಗ್ ಲಯನ್’ ಕಾರ್ಯಾಚರಣೆಗಳು ಇರಾನ್‌ನ ಶಕ್ತಿಯನ್ನೇ ಉಡುಗಿಸಿವೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಿಕ ವರದಿಗಳ ಪ್ರಕಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಮುಖ ಕಮಾಂಡರ್‌ಗಳು ಕೂಡ ಈ ದಾಳಿಯಲ್ಲಿ ಹತರಾಗಿದ್ದಾರೆ ಎನ್ನಲಾಗುತ್ತಿದೆ. ಇದು ಇರಾನ್‌ನಲ್ಲಿ ನಾಯಕತ್ವದ ಶೂನ್ಯತೆಯನ್ನು ಸೃಷ್ಟಿಸಿದ್ದು, ಇಡೀ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ.

ಹಿಂದೂ ಮಹಾಸಾಗರದಲ್ಲಿ ಸಮರ

ಯುದ್ಧವು ಕೇವಲ ಇರಾನ್ ಗಡಿಯೊಳಗೆ ಸೀಮಿತವಾಗಿಲ್ಲ. ಶ್ರೀಲಂಕಾ ಸಮೀಪದ ಸಮುದ್ರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ಅಮೆರಿಕದ ಜಲಂತರ್ಗಾಮಿ ನೌಕೆ (Submarine) ದಾಳಿ ನಡೆಸಿದೆ. ಅತ್ಯಾಧುನಿಕ ಟಾರ್ಪಿಡೊ ದಾಳಿಗೆ ಇರಾನ್ ನೌಕೆ ಛಿದ್ರವಾಗಿದ್ದು, ಅದರಲ್ಲಿದ್ದ 80 ಸೈನಿಕರು ಸಾವನ್ನಪ್ಪಿದ್ದಾರೆ. ಇದು ಅಂತರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚಲನ ಮೂಡಿಸಿದೆ.

ಜಾಗತಿಕ ಆತಂಕ !

ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳೇ ಗುರಿಯಾಗಿರುವುದರಿಂದ, ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ವಿಶ್ವಸಂಸ್ಥೆಯು ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸುತ್ತಿದೆ. ಆದರೆ, ಇರಾನ್‌ನ ಪ್ರತೀಕಾರದ ಸಾಧ್ಯತೆಗಳು ಈ ವಲಯವನ್ನು ಮತ್ತಷ್ಟು ಅಸ್ಥಿರತೆಗೆ ತಳ್ಳುವ ಆತಂಕ ಮೂಡಿಸಿವೆ,

[t4b-ticker]
error: Content is protected !!