ರಷ್ಯಾ ತೈಲ ಖರೀದಿಗೆ ಭಾರತಕ್ಕೆ ‘ಅನುಮತಿ’ ನೀಡಿದ್ದೇವೆ: ಅಮೆರಿಕ

Picture of Savistara

Savistara

Bureau Report

ನ್ಯೂಯಾರ್ಕ್ / ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿಜಾಗತಿಕ ತೈಲ ಪೂರೈಕೆಯನ್ನು ಸುಗಮಗೊಳಿಸುವ ಉದ್ದೇಶದಿಂದ, ಈಗಾಗಲೇ ಸಮುದ್ರ ಮಾರ್ಗದಲ್ಲಿ ಸಾಗಣೆ ಹಂತದಲ್ಲಿರುವ ರಷ್ಯಾ ತೈಲ ಖರೀದಿಗೆ ಭಾರತಕ್ಕೆ ‘ಅನುಮತಿ’ ನೀಡಲಾಗಿದೆ ಎಂದು ಅಮೆರಿಕ ಹೇಳಿದೆ.

`ಜಾಗತಿಕ ತೈಲ ಪೂರೈಕೆಯು ಅತ್ಯಂತ ಸಮರ್ಪಕವಾಗಿದೆ. ಈಗಾಗಲೇ ಸಮುದ್ರ ಮಾರ್ಗದಲ್ಲಿ ಸಾಗಣೆಯಲ್ಲಿರುವ ರಷ್ಯಾದ ತೈಲವನ್ನು ಖರೀದಿ ಮಾಡಲು ನಮ್ಮ ಮಿತ್ರ ರಾಷ್ಟ್ರವಾದ ಭಾರತಕ್ಕೆ ಅನುಮತಿ ನೀಡಲು ಹಣಕಾಸು ಇಲಾಖೆಯು ನಿನ್ನೆ ಸಮ್ಮತಿಸಿದೆ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ‘ಫಾಕ್ಸ್ ಬ್ಯುಸಿನೆಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.’ಭಾರತೀಯರು ನಮಗೆ ಉತ್ತಮ ಸಹಕಾರ ನೀಡಿದ್ದಾರೆ. ರಷ್ಯಾದ ತೈಲ ಖರೀದಿ ನಿಲ್ಲಿಸಬೇಕು ಎಂದು ಹೇಳಿದಾಗ ಅವರು ಅದನ್ನು ಪಾಲಿಸಿದ್ದಾರೆ. ಅವರಿಗೆ ನಮ್ಮ ತೈಲ ನೀಡಲಿದ್ದಾರೆ. ಸದ್ಯ ಉದ್ಭವಿಸುರುವ ತಾತ್ಕಾಲಿಕ ಬಿಕ್ಕನ್ನು ಸುಗಮಗೊಳಿಸಲು ರಷ್ಯಾ ತೈಲ ಖರೀದಿಗೆ ಭಾರತಕ್ಕೆ ನಾವು ಅನುಮತಿ ನೀಡಿದ್ದೇವೆ’ ಎಂದು ಹೇಳಿದ್ದಾರೆ.

ನಾವು ನಿರ್ಬಂಧ ಹೇರಿರುವ ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲ ಜಲಮಾರ್ಗದಲ್ಲಿದೆ. ಅದರ ಮೇಲೆ ನಿರ್ಬಂಧ ಹಿಂಪಡೆಯುವ ಮೂಲಕ ಪೂರೈಕೆ ಸುಗಮಗೊಳಿಸಬಹುದು. ಈ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಈ ಸಂಘರ್ಷದ ಸಮಯದಲ್ಲಿ ಮಾರುಕಟ್ಟೆಗೆ ನಿರಾಳತೆ ತರಲು ನಾವು ಕ್ರಮಗಳನ್ನು ಘೋಷಿಸುವ ಪ್ರಕ್ರಿಯೆಯನ್ನು ಮುಂದುವರಿಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ರಷ್ಯಾ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ ಎಂದು ಟ್ರಂಪ್‌ ಆಡಳಿತದ ಹಲವು ಅಧಿಕಾರಿಗಳು ಹೇಳಿದ್ದಾರೆ.ದಕ್ಷಿಣ ಏಷ್ಯಾದಲ್ಲಿ ಸಾಗಣೆಯಲ್ಲಿರುವ ರಷ್ಯಾ ತೈಲ ಖರೀದಿಗೆ ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ನಾವು ಅವಕಾಶ ನೀಡಿದ್ದೇವೆ ಎಂದು ಅಮೆರಿಕ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ತೈಲ ಬೆಲೆ ಇಳಿಕೆ ಮಾಡಲು ಇದು ತಾತ್ಕಾಲಿಕ ಕ್ರಮ ಎಂದಿದ್ದರು.

[t4b-ticker]
error: Content is protected !!