ಇರಾನ್ ಗಲ್ಫ್ ನ ನ ನೆರೆ ರಾಷ್ಟ್ರಗಳಿಗೆ ‘ಶರಣಾಗಿದೆ’, ಇಂದು ತುಂಬಾ ಕಠಿಣ ದಾಳಿ ನಡೆಯಬಹುದು: ಟ್ರಂಪ್‌ ಎಚ್ಚರಿಕೆ

Picture of Savistara

Savistara

Bureau Report

ವಾಷಿಂಗ್ಟನ್: ಇರಾನ್ ಮಧ್ಯಪ್ರಾಚ್ಯದ ತನ್ನ ನೆರೆ ರಾಷ್ಟ್ರಗಳಿಗೆ ಕ್ಷಮೆಯಾಚಿಸಿ ಶರಣಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ಜೊತೆಗೆ, ಇರಾನ್ ಮೇಲೆ ಇಂದು ‘ತುಂಬಾ ಕಠಿಣ’ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.ತಮ್ಮ’ಟ್ರುತ್ ಸೋಶಿಯಲ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.ಇರಾನ್ ಈಗ ತನ್ನ ನೆರೆ ರಾಷ್ಟ್ರಗಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಎಂಬ ಭರವಸೆಯನ್ನು ನೀಡಿದೆ ಎಂದು ಟ್ರಂಪ್ ವಾದಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳ ಪರಿಣಾಮವಾಗಿ ಇರಾನ್ ಈ ಭರವಸೆ ನೀಡಲು ಒತ್ತಡಕ್ಕೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ.ಇದರ ನಡುವೆ, ಇರಾನ್ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದನ್ನೂ ಟ್ರಂಪ್ ಸೂಚಿಸಿದ್ದಾರೆ. ಇರಾನ್ ನ ‘ಕೆಟ್ಟ ನಡವಳಿಕೆ’ ಹಿನ್ನೆಲೆಯಲ್ಲಿ ಈಗವರೆಗೂ ಗುರಿಯಾಗಿಸದ ಪ್ರದೇಶಗಳು ಮತ್ತು ಜನರ ಗುಂಪುಗಳ ಮೇಲೂ ದಾಳಿ ನಡೆಸುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

[t4b-ticker]
error: Content is protected !!