ಇಸ್ರೇಲ್ ಗೆ 20 ಸಾವಿರಕ್ಕೂ ಹೆಚ್ಚು ಬಾಂಬ್ ಮಾರಾಟಕ್ಕೆ ಅಮೆರಿಕ ಅನುಮೋದನೆ

Picture of Savistara

Savistara

Bureau Report

ಕಾಂಗ್ರೆಸ್‌ ಪರಿಶೀಲನೆ ಪ್ರಕ್ರಿಯೆ ಕೈಬಿಟ್ಟ ಟ್ರಂಪ್!

ವಾಷಿಂಗ್ಟನ್, ಮಾ. 8: ಇಸ್ರೇಲ್ ಗೆ ಸುಮಾರು 650 ಮಿಲಿಯನ್ ಡಾಲರ್ ಮೌಲ್ಯದ 20 ಸಾವಿರಕ್ಕೂ ಹೆಚ್ಚು ಬಾಂಬ್ ಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.ಡೊನಾಲ್ಡ್ ಟ್ರಂಪ್‌ ಆಡಳಿತವು ಈ ಮಾರಾಟಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಡೆಯುವ ಕಾಂಗ್ರೆಸ್ ಪರಿಶೀಲನಾ ಪ್ರಕ್ರಿಯೆಯನ್ನು ಬಿಟ್ಟು ಕ್ರಮ ಕೈಗೊಂಡಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ‘ತುರ್ತು ಪರಿಸ್ಥಿತಿ’ ಅಸ್ತಿತ್ವದಲ್ಲಿದೆ ಎಂದು ನಿರ್ಧರಿಸಿದ್ದರಿಂದ ಆಡಳಿತಕ್ಕೆ ಕಾಂಗ್ರೆಸ್‌ ಪರಿಶೀಲನಾ ಪ್ರಕ್ರಿಯೆಯನ್ನು ಕೈಬಿಡಲು ಅವಕಾಶ ದೊರಕಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.ಇದಲ್ಲದೆ, ನೇರ ವಾಣಿಜ್ಯ ಮಾರಾಟದ ಮೂಲಕ ಇಸ್ರೇಲ್ ಇನ್ನೂ 298 ಮಿಲಿಯನ್ ಡಾಲರ್ ಮೌಲ್ಯದ ಯುದ್ಧಸಾಮಗ್ರಿಗಳನ್ನು ಖರೀದಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ 2024ರಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಹಮಾಸ್ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಗಾಝಾದ ಜನನಿಬಿಡ ಪ್ರದೇಶಗಳಲ್ಲಿ ಇಸ್ರೇಲ್ ಇದೇ ರೀತಿಯ ಭಾರೀ ಯುದ್ಧಸಾಮಗ್ರಿಗಳನ್ನು ಬಳಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

[t4b-ticker]
error: Content is protected !!