ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ | ಖತರ್, ಬಹರೈನ್, ಸೌದಿ ಅರೇಬಿಯಾ, ಯುಎಇ ಮೇಲೆಸರಣಿ ದಾಳಿ : ವರದಿ

Picture of Savistara

Savistara

Bureau Report

ರಿಯಾದ್ : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಖತ‌ರ್, ಬಹರೈನ್, ಸೌದಿ ಅರೇಬಿಯಾ ಮತ್ತು ಯುಎಇಯನ್ನು ಗುರಿಯಾಗಿಸಿಕೊಂಡು ಇರಾನ್ ಸರಣಿ ದಾಳಿಯನ್ನು ನಡೆಸಿರುವ ಬಗ್ಗೆ aljazeera.com ವರದಿ ಮಾಡಿದೆ.ಖತ‌ರ್ ಮೇಲೆ ಬೆಳಗಿನ ಜಾವ 3 ಗಂಟೆಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿಗಳನ್ನು ಆಕಾಶದಲ್ಲೇ ತಡೆಯಲಾಗಿದೆ. ದೋಹಾದಲ್ಲಿ ಆಕಾಶದಲ್ಲೇ 12 ಅಥವಾ ಅದಕ್ಕಿಂತ ಹೆಚ್ಚು ಭಾರೀ ಸ್ಫೋಟಗಳ ಶಬ್ದ ಕೇಳಿಸಿದೆ. ಹೊಗೆ ದೃಶ್ಯವೂ ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.ಸಿತ್ರಾ ಪ್ರದೇಶದಲ್ಲಿ ಡೋನ್ ದಾಳಿಯಲ್ಲಿ 32 ನಾಗರಿಕರು ಗಾಯಗೊಂಡಿದ್ದಾರೆ ಎಂದು ಬಹರೈನ್ ಸರಕಾರಿ ಮಾಧ್ಯಮ ವರದಿ ಮಾಡಿದೆ.ಶೈಬಾ ತೈಲಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಡೋನ್ ದಾಳಿಯನ್ನು ತಡೆಹಿಡಿಯಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ಹೇಳಿದೆ. ರಿಯಾದ್‌ನ ಉತ್ತರಕ್ಕೆ ಎರಡು ಡೋನ್‌ಗಳನ್ನು ಹೊಡೆದುರುಳಿಸಿರುವುದಾಗಿಯೂ ತಿಳಿಸಿದೆ.ಯುಎಇ ಫುಜೈರಾ ಪ್ರದೇಶದಲ್ಲಿ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.

[t4b-ticker]
error: Content is protected !!