500ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡ‌ರ್ ಹೊಂದಿದ್ದ ಟ್ರಕ್ ಕಳ್ಳತನ !

Picture of Savistara

Savistara

Bureau Report

ಜಾನ್ಸಿ(ಉತ್ತರ ಪ್ರದೇಶ): ಪಶ್ಚಿಮ ಏಷ್ಯಾದಲ್ಲಿನಸಂಘರ್ಷದಿಂದ ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಂಟಾಗಿರುವ ಬೆನ್ನಲ್ಲೇ 500ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್‌ ಹೊಂದಿದ್ದ ಟ್ರಕ್ ಕಳ್ಳತನವಾಗಿರುವ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ.

ರಾಯಗಂಜ್ ಮೂಲದ ನೀರಜ್ ಅಗರವಾಲ್ ಅವರಿಗೆ ಸೇರಿದ ಟ್ರಕ್‌ನಲ್ಲಿ ಭಾರತ್‌ ಪೆಟ್ರೋಲಿಯಂಗೆ ಸೇರಿದ 524 ಎಲ್‌ಪಿಜಿ ಸಿಲಿಂಡ‌ರ್ ಸಾಗಿಸಲಾಗುತ್ತಿತ್ತು. ಮಾ.2ರಂದು ಟ್ರಕ್ ಚಾಲಕ ರಾಜ್‌ಕುಮಾ‌ರ್ ಎನ್ನುವವರು ಗಾಡಿಯನ್ನು ಕರಾರಿ ಡಿಪೊ ಬಳಿ ನಿಲ್ಲಿಸಿ, ಹೋಳಿ ಹಬ್ಬಕ್ಕಾಗಿ ಊರಿಗೆ ತೆರಳಿ ಮಾ.6ರಂದು ಮರಳಿ ಬಂದಾಗ ಟ್ರಕ್‌ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನೀರಜ್ ಅಗರವಾಲ್ ಅವರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಾ.7ರಂದು ಬರಗಾಂವ್‌ ಪ್ರದೇಶದ ನಿರ್ಜನ ಸ್ಥಳವೊಂದರಲ್ಲಿ ಟ್ರಕ್ ಪತ್ತೆಯಾಗಿದೆ. ಆದರೆ, ಅದರಲ್ಲಿದ್ದ ಸಿಲಿಂಡರ್‌ಗಳು ಕಳ್ಳತನವಾಗಿವೆ ಎಂದು ಹೇಳಿದ್ದಾರೆ.ಪ್ರಕರಣದ ತನಿಖೆ ನಡೆಯುತ್ತಿದ್ದು ಆದಷ್ಟು ಬೇಗ ಕಳ್ಳರನ್ನು ಪತ್ತೆ ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

[t4b-ticker]
error: Content is protected !!