ಮೇಲ್ಮನೆ ಜಿದ್ದಾಜಿದ್ದಿ: 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ

Picture of Savistara

Savistara

Bureau Report

ದೇಶದ 10 ರಾಜ್ಯಗಳ ಒಟ್ಟು 37 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಪೈಕಿ 7 ರಾಜ್ಯಗಳ 26 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದ್ದು, ಬಾಕಿ ಉಳಿದ 11 ಸ್ಥಾನಗಳಿಗಾಗಿ ಮಾತ್ರ ಇಂದು ಮತದಾನ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ:

ಮತದಾನ: ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ.

ಮತ ಎಣಿಕೆ: ಇಂದು ಸಂಜೆ 5:00 ಗಂಟೆಗೆ ಪ್ರಾರಂಭವಾಗಲಿದ್ದು, ರಾತ್ರಿಯ ವೇಳೆಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು?

ಮಹಾರಾಷ್ಟ್ರ: 7

ತಮಿಳುನಾಡು: 6

ಪಶ್ಚಿಮ ಬಂಗಾಳ & ಬಿಹಾರ: ತಲಾ 5

ಒಡಿಶಾ : 4

ಅಸ್ಸಾಂ : 3

ಹರ್ಯಾಣ, ಛತ್ತೀಸ್‌ಗಢ & ತೆಲಂಗಾಣ: ತಲಾ 2

ಹಿಮಾಚಲ ಪ್ರದೇಶ: 1ಪ್ರಸ್ತುತ 234 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 134 ಸದಸ್ಯರೊಂದಿಗೆ ಬಲಿಷ್ಠವಾಗಿದೆ. ಎದುರಾಳಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ 80 ಸದಸ್ಯರನ್ನು ಹೊಂದಿದೆ. ಈ ಚುನಾವಣೆಯ ನಂತರ ಮೇಲ್ಮನೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಲ ಮತ್ತಷ್ಟು ವೃದ್ಧಿಸುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಇದು ಸಹಕಾರಿಯಾಗಲಿದೆ.

ರಾಜಕೀಯ ದಿಗ್ಗಜರಾದ ಶರದ್ ಪವಾರ್, ರಾಮದಾಸ್ ಆಥಾವಳೆ, ತಂಬಿದುರೈ, ಬಾಬುಲ್ ಸುಪ್ರಿಯೋ, ವಿನೋದ್ ತಾವಡೆ ಮತ್ತು ಅಭಿಷೇಕ್ ಮನು ಸಿಂಫ್ಟಿ ಅವರಂತಹ ನಾಯಕರು ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿ ರಾಜ್ಯಸಭೆ ಪ್ರವೇಶಿಸುತ್ತಿರುವುದು ವಿಶೇಷ.

[t4b-ticker]
error: Content is protected !!