ಇರಾನ್ – ಇಸ್ರೇಲ್ ವಾರ್ | ತುರ್ತು ಮಿಲಿಟರಿ ಬಜೆಟ್‌ಗೆ ಇಸ್ರೇಲ್ ಅಸ್ತು

Picture of Savistara

Savistara

Bureau Report

ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಇಸ್ರೇಲ್ ಸರ್ಕಾರ ಮಿಲಿಟರಿ ಖರೀದಿಗಳಿಗೆ 827 ಮಿಲಿಯನ್‌ ಡಾಲರ್ (ಸುಮಾರು 7,656 ಕೋಟಿ ರೂ.) ಮೊತ್ತದ ತುರ್ತು ಬಜೆಟ್‌ಗೆ ಅನುಮೋದನೆ ನೀಡಿದೆ.ಕ್ಯಾಬಿನೆಟ್ ಸಭೆಯಲ್ಲಿ ಸುಮಾರು 2.6 ಶತಕೋಟಿ ಶೇಕೆಲ್ ಮೌಲ್ಯದ ಈ ಪ್ಯಾಕೇಜ್‌ಗೆ ಒಪ್ಪಿಗೆ ನೀಡಲಾಗಿದೆ ಎಂದು ವರದಿಯಾಗಿದೆ.

Advertisement

ಈ ಹೆಚ್ಚುವರಿ ನಿಧಿಯನ್ನು ಭದ್ರತಾ ಸಾಮಗ್ರಿಗಳ ಖರೀದಿ ಮತ್ತು ತುರ್ತು ಅಗತ್ಯಗಳಿಗೆ ಬಳಸಲಾಗುತ್ತದೆ. ಹೊಸ ಬಜೆಟ್‌ನೊಂದಿಗೆ ಇರಾನ್ ವಿರುದ್ಧ ಕನಿಷ್ಠ ಮೂರು ವಾರಗಳ ಸೈನಿಕ ಕಾರ್ಯಾಚರಣೆ ಮುಂದುವರಿಸಲು ಇಸ್ರೇಲ್ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.ಇದರ ನಡುವೆ ಇಸ್ರೇಲ್ ಪಡೆಗಳು ಪಶ್ಚಿಮ ಇರಾನ್ ಪ್ರದೇಶದಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿ ಮಿಲಿಟರಿ ಹಾಗೂ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡಿವೆ. ಆದರೆ ಈ ದಾಳಿಯಿಂದ ಸಂಭವಿಸಿದ ಹಾನಿ ಅಥವಾ ಸಾವಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!