ಪ್ರಧಾನಿ ಮೋದಿ ಭೇಟಿಗೂ ಇರಾನ್ ಮೇಲಿನ ದಾಳಿಗೂ ಯಾವುದೇ ಸಂಬಂಧ ಇಲ್ಲ: ಇಸ್ರೇಲ್ ರಾಯಭಾರಿ ಸ್ಪಷ್ಟನೆ

Picture of Savistara

Savistara

Bureau Report

ಮದ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೂ ಭಾರತದ ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಭಾರತದಲ್ಲಿನ ರಾಯಭಾರಿ ರೂವನ್ ಅಜರ್ ಸ್ಪಷ್ಟನೆ ನೀಡಿದ್ದಾರೆ.ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿ ಹಿಂತಿರುಗಿದ ಕೆಲವೇ ದಿನಗಳಲ್ಲಿ ಅಮೆರಿಕಾ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು.ಇದೀಗ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೈವನ್ ಅಜಾರ್‌ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರಧಾನಿ ಮೋದಿ ಇಸ್ರೇಲ್‌ಗೆ ಬರುವ ಮೊದಲೇ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿತ್ತು. ಆದರೆ ದಾಳಿಗೆ ಅನುಮೋದನೆ ನೀಡುವ ಕ್ಯಾಬಿನೆಟ್ ನಿರ್ಧಾರವು ಮೋದಿ ತೆರಳಿದ ನಂತರವೇ ನಡೆಯಿತು ಎಂದು ಹೇಳಿದ್ದಾರೆ.

ನಮಗೆ ಇರಾನ್ ಮೇಲೆ ಯಾವುದೇ ಆಕ್ರಮಣ ಮಾಡುವ ಉದ್ದೇಶ ಇರಲಿಲ್ಲ. ಆದರೆ ಅಲ್ಲಿನ ಜನರು ತಮ್ಮ ದೇಶದ ಆಡಳಿತದ ಬದಲಾವಣೆ ತರಲು ಒತ್ತಡ ಹಾಕುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು ಎಂದು ತಿಳಿಸಿದರು.

[t4b-ticker]
error: Content is protected !!