ಇರಾನ್ ವಿರುದ್ಧದ ಯುದ್ಧ ನಾಲ್ಕರಿಂದ ಆರು ವಾರಗಳಲ್ಲಿ ಕೊನೆಯಾಗಬಹುದು: ಡೊನಾಲ್ಡ್‌ ಟ್ರಂಪ್

Picture of Savistara

Savistara

Bureau Report

ಹೊಸದಿಲ್ಲಿ : ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವು ನಾಲ್ಕರಿಂದ ಆರು ವಾರಗಳಲ್ಲಿ ಕೊನೆಯಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಭೂಪ್ರದೇಶದಲ್ಲಿ ಭೂಸೇನೆ ನಿಯೋಜನೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Advertisement

ಫೆಬ್ರವರಿ 28ರಂದು ಆರಂಭವಾದ ಈ ಯುದ್ಧ ಎಷ್ಟು ಸಮಯ ಮುಂದುವರಿಯಲಿದೆ? ಯಾವ ರೀತಿಯ ಕಾರ್ಯಾಚರಣೆಗಳು ನಡೆಯಲಿವೆ? ಅಮೆರಿಕ ಜಯ ಎಂದು ಘೋಷಿಸಲು ಬಳಸುವ ಮಾನದಂಡ ಏನು ಎಂಬುದರ ಬಗ್ಗೆ ಅಮೆರಿಕ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿಲ್ಲ.

Advertisement

“ಆಪರೇಶನ್ ಎಪಿಕ್ ಪ್ಯೂರಿ” (Operation Epic Fury) ಯಾವಾಗ ಮುಗಿಯಬಹುದು ಎಂದು ಪ್ರಶ್ನಿಸಿದಾಗ ಟ್ರಂಪ್ ಆಡಳಿತವು ನಾಲ್ಕರಿಂದ ಆರು ವಾರಗಳ ಅವಧಿಯನ್ನು ಸೂಚಿಸಿದೆ.

Advertisement

ಶುಕ್ರವಾರ ಟೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್‌, ಇರಾನ್‌ನ ಸೈನಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುವಲ್ಲಿ ಹಾಗೂ ಅದರ ಅಣ್ವಸ್ತ್ರ ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿ ಮಾಡುವಲ್ಲಿ ಅಮೆರಿಕ ಮಹತ್ವದ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.

Advertisement

ಆದರೆ, ಇರಾನ್ ಭೂಭಾಗದಲ್ಲಿ ಭೂಸೇನೆ ನಿಯೋಜನೆ ಮಾಡಲು ಸಿದ್ಧವಾಗಿದೆಯೇ ಎಂಬ ಪ್ರಮುಖ ಪ್ರಶ್ನೆಗೆ ಟ್ರಂಪ್‌ ಉತ್ತರವನ್ನು ನೀಡಿಲ್ಲ.

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!