ಕಾಮಗಾರಿ ಹಿನ್ನೆಲೆ:ರೈಲು ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ : ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು 35 ದಿನ ರದ್ದು

Picture of Savistara

Savistara

Bureau Report

ಮಂಗಳೂರು:ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ನರಿಮೊಗರು-ಪಡೀಲ್ ನಿಲ್ದಾಣಗಳ ನಡುವೆ ಬಿಸಿಎಂ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ಪವ‌ರ್ ಬ್ಲಾಕ್ ಕೈಗೊಳ್ಳಲಾಗುತ್ತಿರುವುದರಿಂದ ಕೆಲವು ರೈಲು ಸೇವೆಗಳನ್ನು ರದ್ದುಪಡಿಸಲಾಗುವುದು, ನಿಯಂತ್ರಿಸಲಾಗುವುದು ಹಾಗೂ ಮರುನಿಗದೀಕರಿಸಲಾಗುವುದು.

Advertisement

56629 ಮಂಗಳೂರು -ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ 56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಪ್ಯಾಸೆಂಜರ್ ರೈಲುಗಳನ್ನು ಮಾ.23ರಿಂದ ಏ.14ರವರೆಗೆ ಹಾಗೂ ಜೂ.10ರಿಂದ ಜೂ.21ರವರೆಗೆ ಒಟ್ಟು 35 ದಿನಗಳ ಕಾಲ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Advertisement

ರೈಲುಗಳು ವಿಳಂಬ:ಕೆಲವು ರೈಲುಗಳನ್ನು ನಿರ್ದಿಷ್ಟ ದಿನಗಳಲ್ಲಿ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ.16515 ಯಶವಂತಪುರ-ಕಾರವಾರ ಎಕ್ಸೆಸ್, 16575 ಯಶವಂತಪುರ-ಮಂಗಳೂರು ಎಕ್ಸೆಸ್ ಹಾಗೂ 16539 ಯಶವಂತಪುರ-ಮಂಗಳೂರು ಎಕ್ಸೆಸ್ ರೈಲುಗಳು ಏಪ್ರಿಲ್ ತಿಂಗಳಲ್ಲಿ ನಿಗದಿತ ದಿನಗಳಲ್ಲಿ ಸಂಚರಿಸುವ ವೇಳೆ ಸುಮಾರು 20 ನಿಮಿಷಗಳಷ್ಟು ವಿಳಂಬವಾಗಲಿದೆ. ಅದೇ ರೀತಿ 56229 ಮಂಗಳೂರು- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜ‌ರ್ ರೈಲು ಏ.21ರಿಂದ ಜೂ. 9ರವರೆಗೆ 50 ದಿನಗಳ ಕಾಲ ಸುಮಾರು 55 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ.

Advertisement

ಮರು ನಿಗದಿ: 56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಪ್ಯಾಸೆಂಜ‌ರ್ ರೈಲು ಏ.21ರಿಂದ ಜೂ.9ರವರೆಗೆ ಆಯ್ದ 22 ದಿನಗಳಲ್ಲಿ ಸುಮಾರು 15 ನಿಮಿಷ ತಡವಾಗಿ ಸಂಚರಿಸುವಂತೆ ಮರುನಿಗದಿ ಮಾಡಲಾಗಿದೆ. ಸರಕು ರೈಲುಗಳ ಸಂಚಾರಕ್ಕೆ ಹೆಚ್ಚಿನ ಅಡ್ಡಿಗಳು ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯವಿದ್ದಲ್ಲಿ ಬ್ಲಾಕ್‌ಗಳನ್ನು ಮುಂದೂಡುವ ಅಥವಾ ರದ್ದುಪಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮರುನಿಗದೀಕರಣ: ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್‌-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜ‌ರ್ ರೈಲು ಏ.21ರಿಂದ ಜೂ.9ರವರೆಗೆ ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಪ್ಯಾಸೆಂಜ‌ರ್ ರೈಲು ಏ.21ರಿಂದ ಜೂ.9ರವರೆಗೆ 15 ನಿಮಿಷ ತಡವಾಗಿ ಮರುನಿಗದೀಕರಣಗೊಳಿಸಲಾಗಿದೆ. ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಬೇಕಾಗಿ ಮೈಸೂರು ರೈಲ್ವೆ ವಿಭಾಗದ ಜನಸಂಪರ್ಕಧಿಕಾರಿ ಹಾಗೂ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ವಿನಂತಿಸಿದ್ದಾರೆ.

Advertisement

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!